ಆರಕ್ಷಕರು ಹಳೆಯ ಶೂ, ಹರಿದ ಸಮವಸ್ತ್ರ ವಾಪಸ್ ನೀಡಬೇಕಿಲ್ಲ

MH Police
Published on

| ಹರೀಶ್ ಮೋಟುಕಾನ ಮಂಗಳೂರು

ರಾಜ್ಯದ ಪೊಲೀಸರು ಇನ್ನು ಹಳೇ ಶೂ, ಪಾಲೀಶ್ ಡಬ್ಬ, ಹರಿದ ಸಮವಸ್ತ್ರ ಕಿಟ್ ಕಳೆದು ಹೋದರೆ ಶಿಸ್ತು ಕ್ರಮ ಎದುರಿಸಬೇಕಾಗಿಲ್ಲ. ನಿರುಪಯುಕ್ತವಾದಾಗ ಅವರೇ ನೇರವಾಗಿ ವಿಲೇವಾರಿ ಮಾಡಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೇಬಲ್​ನಿಂದ ಉಪನಿರೀಕ್ಷಕರ ಹುದ್ದೆಯ ತನಕದ ಅಧಿಕಾರಿಗಳು ಸರ್ಕಾರ ನೀಡುತ್ತಿರುವ ವಿವಿಧ ಸಮವಸ್ತ್ರ, ಶೂ, ಪಾಲೀಶ್ ಡಬ್ಬ, ಬೆಲ್ಟ್ ಮೊದಲಾದ ಸಣ್ಣ ಪುಟ್ಟ ಸೊತ್ತುಗಳನ್ನು ಬಳಸಿದ ಬಳಿಕ ನಿರುಪಯುಕ್ತವಾದಾಗ ಬಿಸಾಕುವಂತಿರಲಿಲ್ಲ. ಎರಡು ಅಥವಾ ನಾಲ್ಕು ವರ್ಷಕ್ಕೊಮ್ಮೆ ಡಿವೈಎಸ್ಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ನಡೆಯುವ ಪರಿವೀಕ್ಷಣಾ ಪರೇಡ್​ನಲ್ಲಿ ಹಿಂತಿರುಗಿಸಬೇಕಿತ್ತು. ಕಳೆದು ಹೋಗಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗಿತ್ತು.

ಸಂರಕ್ಷಣೆ ಸವಾಲು: ನಿರುಪಯುಕ್ತ ಸೊತ್ತುಗಳನ್ನು ಕಳೆದು ಹೋಗದಂತೆ ಎಚ್ಚರಿಕೆಯಿಂದ ಸಂರಕ್ಷಿಸಿಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಪೊಲೀಸರ ಸಮಸ್ಯೆ ಅರ್ಥೈಸಿಕೊಂಡ ಡಿಜಿಪಿ ಪ್ರವೀಣ್ ಸೂದ್ ಸರ್ಕಾರಕ್ಕೆ ಮನವರಿಕೆ ಮಾಡಿ ಹಳೇ ನಿಯಮ ರದ್ದು ಮಾಡಿಸಿದ್ದಾರೆ. ಪಿಸ್ತೂಲ್, ವಾಕಿಟಾಕಿ, ಲಾಠಿ ಮತ್ತಿತರ ಸೊತ್ತುಗಳನ್ನು ನಿವೃತ್ತಿ ಸಂದರ್ಭ ಇಲಾಖೆಗೆ ಹಿಂತಿರುಗಿಸಬೇಕು ಎನ್ನುವ ನಿಯಮ ಈ ಹಿಂದಿನಂತೆ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net