ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಮಗ್ರ ಚಾಂಪಿಯನ್

DVG POLICE KREEDAKUTA 29
Published on

ದಾವಣಗೆರೆ: ನಗರದ ಡಿಎಆರ್ ಮೈದಾನದಲ್ಲಿ ಬುಧವಾರ ಮುಕ್ತಾಯವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಡಿ.27ರಿಂದ 29 ರವರೆಗೆ 3 ದಿನಗಳ ಕಾಲ ಆಯೋಜಿಸಿದ್ದ ಕೂಟದಲ್ಲಿ 200ಕ್ಕೂ ಹೆಚ್ಚು ಆರಕ್ಷಕರು ಭಾಗವಹಿಸಿದ್ದರು. ಪೊಲೀಸ್ ಕುಟುಂಬಸ್ಥರ ಮಕ್ಕಳಿಗೆ ಸ್ಪೂನ್‌ನಲ್ಲಿ ನಿಂಬೆಹಣ್ಣು ಇಟ್ಟುಕೊಂಡು ನಡೆಯುವ ಸ್ಪರ್ಧೆ ಸಹ ಆಯೋಜಿಸಲಾಗಿತ್ತು.

ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಜಂಟಿ ಚಾಂಪಿಯನ್ ಎಂದು ಡಿಎಆರ್‌ನ ಎಪಿಸಿ ಎ.ಪಿ.ಜಯಣ್ಣ ಹಾಗೂ ಉತ್ತರ ಸಂಚಾರ ಠಾಣೆ ಸಿಪಿಸಿ ಮಹಾಂತೇಶ ಬಿದರಿ ಅವರನ್ನು ಘೋಷಿಸಲಾಯಿತು. ಮಹಿಳೆಯರ ವಿಭಾಗದಲ್ಲಿ ಬಡಾವಣೆ ಠಾಣೆ ಮಾಲತಿಬಾಯಿ ಚಾಂಪಿಯನ್ ಪ್ರಶಸ್ತಿ ಗೆದ್ದರು.

ಗುಂಪು ಆಟಗಳ ಫಲಿತಾಂಶ:
ಷಟಲ್ ಬ್ಯಾಡ್ಮಿಂಟನ್ ಡಬಲ್ಸ್:
ಎಸಿಬಿ ಡಿವೈಎಸ್ಪಿ ಮಂಜುನಾಥ/ಎಡಿಪಿ ಮಂಜುನಾಥ (ಪ್ರಥಮ), ಎಸ್‌ಪಿ ಸಿ.ಬಿ.ರಿಷ್ಯಂತ್/ಸಿಪಿಐ ಸತೀಶ್ (ದ್ವಿತೀಯ), ಕಬಡ್ಡಿ: ಡಿಎಆರ್ (ಪ್ರಥಮ), ನಗರ ಉಪ ವಿಭಾಗ (ದ್ವಿತೀಯ). ವಾಲಿಬಾಲ್: ಡಿಎಆರ್ (ಪ್ರಥಮ), ನಗರ ಉಪ ವಿಭಾಗ (ದ್ವಿತೀಯ), ಹಗ್ಗ ಜಗ್ಗಾಟ: ಡಿಪಿಒ (ಪ್ರಥಮ), ಡಿಎಆರ್ (ದ್ವಿತೀಯ), ಕ್ರಿಕೆಟ್: ನಗರ ಉಪ ವಿಭಾಗ (ಪ್ರಥಮ), ಜಿಲ್ಲಾ ವಿಶೇಷ ತಂಡ (ದ್ವಿತೀಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net