ಆರಕ್ಷಕರ ನಡೆ ಆರೋಗ್ಯದ ಕಡೆ

Police action towards health
Published on

ವಿಜಯಪುರ:ದಿನದ 24 ಗಂಟೆಯೂ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯವಶ್ಯವಾಗಿದೆ ಎಂದು ಐಆರ್​ಬಿ ಪೊಲೀಸ್​ ಬಟಾಲಿಯನ್​ ಕಮಾಂಡೆಂಟ್​ ಪ್ರಸನ್ನಕುಮಾರ ಹೇಳಿದರು.ನಗರ ಹೊರ ವಲಯದ ಅರಕೇರಿಯಲ್ಲಿ ಐಆರ್​ಬಿ ಪೊಲೀಸ್​ ಬಟಾಲಿಯನ್​ನಲ್ಲಿ ಬಸವನ ಬಾಗೇವಾಡಿಯ ಅಮರೇಶ್ವರ ಕ್ಲಿನಿಕ್​ನ ಡಾ. ಅಮರೇಶ ಮಿಣಜಗಿ ನೇತೃತ್ವದಲ್ಲಿ ಆರಕ್ಷಕರ ನಡಿಗೆ ಆರೋಗ್ಯದ ಕಡೆಗೆ ಎಂಬ ೂಷವಾಕ್ಯದಡಿ ಶುಕ್ರವಾರ ಹಮ್ಮಿಕೊಂಡ ಬೃಹತ್​ ರಕ್ತದಾನ ಶಿಬಿರ, ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯವನ್ನು ಲೆಕ್ಕಿಸದೇ ಸದಾ ಕರ್ತವ್ಯ ಪ್ರೆ ಮೆರೆಯುವ ಪೊಲೀಸರು ಇಂತಹ ಶಿಬಿರದ ಪ್ರಯೋಜನ ಪಡೆಯಬೇಕು. ಹಿತಮಿತ ಆಹಾರ ಸೇವನೆಯ ಜತೆಗೆ ನಿತ್ಯ ವಾಯುವಿಹಾರ, ಯೋಗ, ಧ್ಯಾನಗಳನ್ನೂ ರೂಢಿಸಿಕೊಳ್ಳಬೇಕು ಎಂದರು.ಡಾ. ಅಮರೇಶ ಮಿಣಜಗಿ ಮಾತನಾಡಿ, ತಮ್ಮ ನೆಮ್ಮದಿಯನ್ನೂ ಲೆಕ್ಕಿಸದೇ ಸಮಾಜದ ಸ್ವಾಸ್ಥಕ್ಕಾಗಿ ಹಗಲಿರುಳು ದುಡಿಯುವ ಪೊಲೀಸರ ಸೇವೆ ಅನನ್ಯವಾದದು. ಪೊಲೀಸರ ಆರೋಗ್ಯ ಸುರಕ್ಷತೆಗಾಗಿ ತಮ್ಮ ಸೇವೆ ನಿರಂತರವಾಗಿರಲಿದೆ ಎಂದರು.

ನರರೋಗ ತ ಡಾ. ಹಿತೇಂದ್ರ ನಾಯಕ, ಮನೋವೈದ್ಯೆ ಡಾ. ಸೌಮ್ಯ ನಾಯಕ ಮಾತನಾಡಿದರು.ವೈದ್ಯರಾದ ದೀಪಕ್​ ಕಡೇಲಿ, ಶೀತಲ್​ ನಾಯಕ, ಈರಣ್ಣ ಬಂಡಿ, ಸುರೇಶ ಕಾಗಲಕರರೆಡ್ಡಿ, ಶಂಕರ ಬಡಿಗೇರ, ಅಪೂರ್ವ ಮಾಗಿ, ಅಶ್ವಿನಿ ಹೊಸಮನಿ, ಅಕ್ಷಯ ಪಾಟೀಲ, ಬಸವರಾಜ ಮಾಗಿ, ಮೋಹನಕುಮಾರ ಶ್ರೀಕಂಡೆ, ಹುಸೇನ ಲಾಲಕೋಟ ಮತ್ತಿತರರಿದ್ದರು. ಶಿಬಿರದಲ್ಲಿ 20 ಜನ ರಕ್ತದಾನ ಮಾಡಿದರು. 200 ಕ್ಕೂ ಅಧಿಕ ಐಆರ್​ಬಿ ಪೊಲೀಸರಿಗೆ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು.

* ಫೋಟೋ : ಎಂಎಂ 16&3

ವಿಜಯಪುರ ಹೊರ ವಲಯದ ಅರಕೇರಿಯಲ್ಲಿ ಐಆರ್​ಬಿ ಪೊಲೀಸ್​ ಬಟಾಲಿಯನ್​ನಲ್ಲಿ ಹಮ್ಮಿಕೊಂಡ ಬೃಹತ್​ ರಕ್ತದಾನ ಶಿಬಿರ, ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಪ್ರಸನ್ನಕುಮಾರ, ಡಾ. ಅಮರೇಶ ಮಿಣಜಗಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net