ಪೊಲೀಸ್ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

police
Published on

ಮಡಿಕೇರಿ:

ಪ್ರತಿಯೊಬ್ಬರಲ್ಲೂ ಒಂದೊAದು ರೀತಿಯ ಪ್ರತಿಭೆಗಳು ಇದ್ದು, ಅವರು ಆ ಕ್ಷೇತ್ರದಲ್ಲಿ ದೊಡ್ಡವರಾಗಿರುತ್ತಾರೆ. ಅಂಥವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು. ರಾಜ್ಯದಲ್ಲೇ ಪ್ರಥಮವಾಗಿ ಕೊಡಗು ಜಿಲ್ಲೆಯಲ್ಲಿ ಆರಂಭಿಸಲಾದ ಪೊಲೀಸ್ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಭಾನುವಾರ ಸಂಜೆ ಮಾತನಾಡಿದರು.

ಪ್ರತಿದಿನ ಕೆಲಸದ ಒತ್ತಡದಲ್ಲಿರುವವರಿಗೆ ಒಂದಿಷ್ಟು ಮನೋರಂಜನೆಯ ಅವಶ್ಯಕತೆ ಇರುತ್ತದೆ. ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು, ಒತ್ತಡ ಕಡಿಮೆ ಮಾಡಿಕೊಳ್ಳಲು ಈ ರೀತಿಯ ವೇದಿಕೆ ಮತ್ತು ಕಾರ್ಯಕ್ರಮಗಳು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳು ನೀಡಿರುವ ಸಲಹೆಗೆ ಒತ್ತು ಕೊಟ್ಟು ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ವೇದಿಕೆಯನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕಲಾಗಿದೆ. ಮುಂದೆ ಈ ವೇದಿಕೆ ಬಳಸಿಕೊಂಡು ಪೊಲೀಸ್ ಇಲಾಖೆಯ ಸಿಬ್ಬಂದಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಕಲೆ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಪ್ರಯತ್ನಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಲಾ ಪೋಷಕ ಜಿ. ಚಿದ್ವಿಲಾಸ್ ಮಾತನಾಡಿ ಸಂಸ್ಕಾರ, ಸಂಸ್ಕೃತಿ ಹಾಗೂ ಶಿಸ್ತು ಇರುವ ಕುಟುಂಬ ಕೊಡಗು ಪೊಲೀಸ್ ಇಲಾಖೆಯಾಗಿದ್ದು, ವೇದಿಕೆ ಹುಟ್ಟು ಹಾಕಿದ ಹೆಗ್ಗಳಿಕೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮತ್ತು ಹೆಚ್ಚುವರಿ ಅಧೀಕ್ಷ ಸುಂದರರಾಜನ್ ರವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕರಾವಳಿ ಸಾಂಸ್ಕೃತಿಕ ವೇದಿಕೆಯ ಕೆ.ಕೆ. ನೌಷದ್, ಕೇಶವ, ಖಾಸಗಿ ವಾಹಿನಿ ಮುಖ್ಯಸ್ಥ ಸಚಿನ್ ಪ್ರಕಾಶ್ ಮಾತನಾಡಿದರು. ಪೊಲೀಸ್ ಸಾಂಸ್ಕೃತಿಕ ವೇದಿಕೆÄ ಅಧ್ಯಕ್ಷರೂ ಆದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್ ಸುಂದರ್ ರಾಜ್, ಮಡಿಕೇರಿ ವೃತ್ತ ನಿರೀಕ್ಷ ಪಿ.ಕೆ. ರಾಜು ಮತ್ತಿತರರು ಇದ್ದರು.

ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿಯರಾದ ಹರ್ಷಿಕ ಪೂಣಚ್ಚ ಮತ್ತು ತೇಜಸ್ವಿನಿ ಶರ್ಮಾ ಚಾಲನೆ ನೀಡಿದರು.

ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂನಲ್ಲಿ ಕರ್ತವ್ಯದಲ್ಲಿರುವ ಚಿತ್ರ ನಿರ್ಮಾಪಕ ಇ.ಯು. ವಿಜಯ್, ತೇಜಸ್ವಿನಿ ಶರ್ಮಾ, ಹರ್ಷಿಕ ಪೂಣಚ್ಚ, ಚಿದ್ಬಿಲಾಸ್ ಹಾಗೂ ಕೆ. ರಾಮರಾಜನ್ ಅವರುಗಳು ಇದೇ ವೇಳೆ ಸನ್ಮಾನಿಸಲಾಯಿತು. ನಂತರ ಖಾಸಗಿ ವಾಹಿನಿ ರಿಯಾಲಿಟಿ ಶೋ ಕಲಾವಿದರಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮ ಕಲಾಪ್ರೇಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net