

ಮಡಿಕೇರಿ:
ಕೆಎಸ್‌ಆರ್‌ಟಿಸಿ ಪ್ರಯಾಣಿಕರೋರ್ವರು ಕಳೆದುಕೊಂಡಿದ್ದ ಚಿನ್ನದ ಬ್ರೇಸ್‌ಲೆಟ್‌ನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಇಲ್ಲಿನ ನಗರ ಠಾಣೆಯ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ತೇಲಪಂಡ ಕವನ್ ಕಾರ್ಯಪ್ಪ ಎಂಬವರು ಆ. ೨೯ರಂದು ಕುಶಾಲನಗರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಡಿಕೇರಿಗೆ ತೆರಳುತ್ತಿದ್ದ ಸಂದರ್ಭ ಬ್ರೇಸ್‌ಲೆಟ್ ಕಳೆದುಕೊಂಡಿದ್ದರು. ಇದೇ ಸಂದರ್ಭ ಬಸ್‌ನಲ್ಲಿದ್ದ ಪ್ರಯಾಣಿಕರೋರ್ವರು ಬ್ರೇಸ್‌ಲೆಟ್‌ನ್ನು ಚಾಲಕರಿಗೆ ನೀಡಿ ಮಡಿಕೇರಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರೀತಿ ಘಾಟಗೆ ಅವರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬುಧವಾರ ನಗರ ಠಾಣೆಯಲ್ಲಿ ಕವನ್ ಕಾರ್ಯಪ್ಪ ಅವರು ಪ್ರೀತಿ ಘಾಟಗೆ ಅವರಿಂದ ತಮ್ಮ ಬ್ರೆಸ್‌ಲೆಟ್ ಪಡೆದುಕೊಂಡರು.
ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿಗಳು, ಸಿಬ್ಬಂದಿ ಪ್ರೀತಿ ಅವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡೆಸಿದ್ದಾರೆ.
೩೦ಎಂಡಿಕೆ೦೩: ಪ್ರಯಾಣಿಕರೋರ್ವರು ಕಳೆದುಕೊಂಡಿದ್ದ ಚಿನ್ನದ ಬ್ರೇಸ್‌ಲೆಟ್ ಅನ್ನು ಮಡಿಕೇರಿ ನಗರ ಠಾಣೆಯ ಸಿಬ್ಬಂದಿ ಪ್ರೀತಿ ಘಾಟಗೆ ವಾರಸುದಾರರಿಗೆ ಮರಳಿಸಿದರು.