ಜಾತಿ ನಿಂದನೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

10 KRN-2...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಕೀಳಾಗಿ ಮಾತನಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕೃಷ್ಣರಾಜನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಕೆ.ಆರ್.ನಗರ ಪೊಲೀಸರಿಗೆ ದೂರು ಸಲ್ಲಿಸಲಾಯಿತು. ದೆಗ್ಗನಹಳ್ಳಿ ಆನಂದ್, ಮಧುವನಹಳ್ಳಿ ನಟರಾಜ್, ಕೇಬಲ್ ಮಹದೇವ್ ಇತರರು ಇದ್ದರು.
Published on

ಕೆ.ಆರ್.ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಾತಿನಿಂದನೆ ಹಾಗೂ ಕುರುಬ ಸಮುದಾಯವನ್ನು ಕುರಿತು ಕೀಳಾಗಿ ಮಾತನಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೃಷ್ಣರಾಜನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್ ನೇತೃತ್ವದಲ್ಲಿ ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಸ್ವಾಮೇಗೌಡರಿಗೆ ಮನವಿ ಸಲ್ಲಿಸಿದರು.

ದೆಗ್ಗನಹಳ್ಳಿ ಆನಂದ್ ಮಾತನಾಡಿ, ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಬೆನ್ನಹಟ್ಟಿ ಗ್ರಾಮದ ಬಿ.ಎನ್.ಕುಮಾರ್ ಹಾಗೂ ಶ್ಯಾನುಭೋಗನಹಳ್ಳಿ ಮಹೇಶ್ ಮುಖ್ಯಮಂತ್ರಿಯನ್ನು ಜಾತಿನಿಂದನೆ ಮಾಡಿ, ಕುರುಬ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ನಿಂದಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಮಧುವನಹಳ್ಳಿ ನಟರಾಜ್, ಗ್ರಾಪಂ ಸದಸ್ಯ ಕೇಬಲ್ ಮಹದೇವ್, ಕೃಷ್ಣರಾಜನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳಾದ ಕಾಳೇನಹಳ್ಳಿ ಮಹೇಶ್, ಪಿ.ಪ್ರಜ್ವಲ್, ಧನಂಜಯ, ಎಂ.ಎಸ್.ನವೀನ್, ಕುಮಾರ್, ಸಚಿನ್, ಬಿ.ಎನ್.ನವೀನ್, ಬಿ.ಎಂ.ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net