ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

Bike Accident_2
Published on

ಹಾನಗಲ್ಲ: ಬೈಕ್‌ವೊಂದು ರಸ್ತೆ ಬದಿಯ ಕಂಬಕ್ಕೆ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ತಾಲೂಕಿನ ನಿಟಗಿನಕೊಪ್ಪದ ಬಳಿ ಭಾನುವಾರ ನಡೆದಿದೆ.
ಶಿಗ್ಗಾಂವಿ ತಾಲೂಕಿನ ಕಮಲಾನಗರ ತಾಂಡಾದ ಆನಂದ ಚನ್ನಪ್ಪ ಲಮಾಣಿ (34) ಮೃತ ಬೈಕ್ ಸವಾರ.
ಇವರು ತಡಸದಿಂದ ನಿಟಗಿನಕೊಪ್ಪದ ಕಡೆಗೆ ಬರುತ್ತಿದ್ದ ಸಮಯದಲ್ಲಿ ರಸ್ತೆ ಬದಿ ನಿಲ್ಲಿಸಿದ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net