ಬೆಂಗಳೂರು ಪೊಲೀಸರ ಕಿರುಕುಳ ಆರೋಪ : ತುಮಕೂರು ಜುವೆಲರ್ಸ್‌ ಮಾಲೀಕರ ಪ್ರತಿಭಟನೆ

11TMK_Juyalars
Published on

ತುಮಕೂರು : ಜುವೆಲರ್ಸ್‌ ಮಾಲೀಕರು ಹಾಗೂ ಪೊಲೀಸರ ನಡುವೆ ಸಂಘರ್ಷ ತಾರಕಕ್ಕೇರಿದೆ, ಕಳ್ಳರಿಂದ ಆಭರಣ ಕೊಂಡುಕೊಳ್ಳುತ್ತಾರೆ ಎಂದು ಜುವೆಲರ್ಸ್‌ ಮಾಲೀಕರ ಮೇಲೆ ಪೊಲೀಸರು ಆರೋಪಿಸಿದ್ದರೆ, ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಇಳಿದಿದ್ದಾರೆ.

ಕಳವು ಮಾಡಿದ ಆಭರಣ ಕೊಂಡುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಸೋಮವಾರ ನಗರದ ಶುಭಂ ಹಾಗೂ ಶಂಕರ್ ಜುವೆಲರ್ಸ್‌ ಮಾಲೀಕರನ್ನು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಕರೆದೊಯ್ದಿದ್ದಾರೆ ಎನ್ನಲಾಗಿದ್ದು, ಬಂಧನ ಖಂಡಿಸಿ ಜುವೆಲರ್ಸ್‌ ಮಾಲೀಕರು ಪ್ರತಿಭಟನೆಗೆ ಮುಂದಾದರು.

ತನಿಖೆ ಹೆಸರಿನಲ್ಲಿ ಪೊಲೀಸರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಜುವೆಲರ್ಸ್‌ ಹಾಗೂ ಗಿರವಿ ಅಂಗಡಿ ವಾಲೀಕರು ಸೋಮವಾರ ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿ ನಗರ ವೃತ್ತ ನಿರೀಕ್ಷಕರ ಪೊಲೀಸ್ ಠಾಣೆ ಮುಂಭಾಗ ಸಮಾವೇಶಗೊಂಡು ಪ್ರತಿಭಟನೆ ಮಾಡಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಚಿನ್ನದಂಗಡಿ ವಾಲೀಕರ ಸಂಘದ ಮುಖಂಡ ಜೆ.ಪಿ.ಜೈನ್ ಮಾತನಾಡಿ, ಬೆಂಗಳೂರಿನ ಎಚ್‌ಎಸ್‌ಆರ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಏಕಾಏಕಿ ಜುವೆಲರ್ಸ್‌ಗಳಿಗೆ ಬಂದು ವಾಲೀಕರನ್ನು ಕಳ್ಳರ ರೀತಿ ಕರೆದೊಯ್ದಿದ್ದು ಖಂಡನೀಯ ಎಂದರು.

ಪ್ರತಿನಿತ್ಯ ತನಿಖೆ ಹೆಸರಿನಲ್ಲಿ ಅಂಗಡಿಗಳಿಗೆ ಬರುವ ಪೊಲೀಸರು ಇಲ್ಲಸಲ್ಲದ ಆರೋಪಗಳನ್ನು ವಾಡಿ ಸುಖಾಸುಮ್ಮನೆ ಭಯ ಮೂಡಿಸುತ್ತಿದ್ದಾರೆ, ಅಂಗಡಿ ವಾಲೀಕರನ್ನು ಬೆದರಿಸಿ ವಸೂಲಿಗೆ ಇಳಿದಿದ್ದಾರೆ. ಪ್ರತಿನಿತ್ಯ ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಸ್ಥಳೀಯ ಪೊಲೀಸರಿಗೆ ಯಾವ ವಾಹಿತಿಯನ್ನೂ ನೀಡದೆ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಸುಳ್ಳು ಕೇಸ್ ಹಾಕುವ ಬೆದರಿಕೆ ಹಾಕಿ ನಮ್ಮಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವ ಉದಾಹರಣೆಗಳಿವೆ, ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಆರೋಪಿಗಳ ಹೆಸರಿನಲ್ಲಿ ಕೆಲವರನ್ನು ಕರೆತಂದು ಯಾವುದೇ ದಾಖಲೆಗಳಿಲ್ಲದಿದ್ದರೂ ನಮ್ಮಿಂದ ಚಿನ್ನವನ್ನು ಬಲವಂತವಾಗಿ ಪಡೆದು, ಹಣ ಪಡೆದು ಹೋಗುತ್ತಿದ್ದಾರೆ ಎಂದು ಮಾಲೀಕರು ಆರೋಪಿಸಿದರು.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಸಾಕಷ್ಟು ಸಲ ದೂರು ನೀಡಿ, ರಕ್ಷಣೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ, ನಾವೆಲ್ಲಾ ವ್ಯಾಪಾರ ಸ್ಥಗಿತಗೊಳಿಸಿದ್ದು ನಮ್ಮ ಅಂಗಡಿಗಳ ಕೀಯನ್ನು ಪೊಲೀಸರಿಗೆ ನೀಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಪೊಲೀಸರು, ತನಿಖೆ ನಡೆಸುವುದಾಗಿ ಭರವಸೆ ನೀಡಿ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದರು.

ಎಚ್‌ಎಸ್‌ಆರ್ ಲೇಔಟ್ ಪೊಲೀಸರೆಂದು ಖಾಸಗಿ ವಾಹನದಲ್ಲಿ ಬಂದಿದ್ದ ಪೊಲೀಸರು ಶುಭಂ, ಶಂಕರ್ ಜುವೆಲರ್ಸ್‌ ಮಾಲೀಕರನ್ನು ಕರೆದೊಯ್ದಿದ್ದಾರೆ, ಮನೆಯವರಿಗೂ ಮಾಹಿತಿ ನೀಡದೆ ಕರೆದೊಯ್ದಿರುವುದು ಖಂಡನೀಯ, ಪ್ರತಿನಿತ್ಯ ಪೊಲೀಸರ ಕಿರುಕುಳದಿಂದ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಜೆ.ಪಿ.ಜೈನ್ ಜುವೆಲರ್ಸ್‌ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net