ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ ಪ್ರದಾನ

udp-12-award 1
Published on

ಉಡುಪಿ: ತುಳುನಾಡಿನ ಮೌಖಿಕ ಪರಂಪರೆ ಶ್ರೀಮಂತವಾಗಿದೆ. 15 ರಿಂದ 18ನೇ ಶತಮಾನದ ಅವಧಿಯಲ್ಲಿ 300ಕ್ಕೂ ಹೆಚ್ಚು ಭೂತಾರಾಧನೆ ಪಾಡ್ದನಗಳು ರಚನೆಯಾಗಿದೆ. ತುಳುನಾಡಿನಲ್ಲಿ ಎಷ್ಟು ಭೂತಗಳಿವೆ ಎಂಬ ಸಂಖ್ಯೆ ಬಗ್ಗೆ ಹಲವು ಜಿಜ್ಞಾಸೆಗಳಿವೆ. ಆದರೆ ಪ್ರತಿ ಭೂತಕ್ಕೆ ಸಂಬಂಧಪಟ್ಟ ಪಾಡ್ದನಗಳಿವೆ. ಇವೆಲ್ಲವೂ ಪಾರಂಪರಿಕ ಇತಿಹಾಸಕ್ಕೆ ಪೂರಕವಾಗಿವೆ ಎಂದು ಹಿರಿಯ ಸಂಶೋಧಕ ಡಾ. ಪುಂಡಿಕಾೃ ಗಣಪಯ್ಯ ಭಟ್​ ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ವತಿಯಿಂದ ನಡೆದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್​.ಆರ್​. ಹೆಗ್ಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೌಖಿಕ ಪರಂಪರೆ ಮತ್ತು ತುಳುವ ಇತಿಹಾಸ ಬಗ್ಗೆ ಅವರು ಉಪನ್ಯಾಸ ನೀಡಿದರು.

ಪಾಡ್ದನಗಳು ಮೌಖಿಕ ಪರಂಪರೆ ಆಕರಗಳಾಗಿವೆ. ತುಳುನಾಡಿನಲ್ಲಿ 2 ಸಾವಿರಕ್ಕೂ ಅಧಿಕ ಶಾಸನಗಳಿವೆ. ಆದರೆ ಭೂತಾರಾಧನೆ ಬಗ್ಗೆ ಮೌನ ವಹಿಸಿರುವುದು ಆಶ್ಚರ್ಯಕರ ಸಂಗತಿ. ಅದೇ ರೀತಿ ಪಾಡ್ದನಗಳು ಸಮಕಾಲೀನ ರಾಜಕೀಯ ಮತ್ತು ಸಾರ್ವಭೌಮ ಶಕ್ತಿಗಳ ಬಗ್ಗೆ ರ್ನಿಲಕ್ಷ$್ಯ ವಹಿಸಿವೆ ಎಂದರು.

ಹಿಂದೆ ರಾಜಕೀಯ ವ್ಯಕ್ತಿಗಳು ಮತ್ತು ರಾಜಕೀಯದ ಸುತ್ತ ಇತಿಹಾಸ ರೂಪಿಸಲಾಗುತ್ತಿತ್ತು. ಕಳೆದ 4 ದಶಕಗಳಿಂದ ಸ್ಥಳಿಯ ಸಂಸತಿಯ ಮೂಲಕ ಇತಿಹಾಸ ಕಟ್ಟಿಕೊಡುವ ಪರಂಪರೆ ಪ್ರಾರಂಭವಾಗಿದೆ. ಪಾರಂಪರಿಕ ಇತಿಹಾಸ ಅಧ್ಯಯನ ವ್ಯಕ್ತಿನಿಷ್ಠ ಮತ್ತು ರಾಜಕೀಯ ನಿಷ್ಠವಾಗಿರುತ್ತದೆ. ಆದರೆ ಇತ್ತೀಚೆಗೆ ಜನ ಅಥವಾ ಸಮಾಜ ನಿಷ್ಠ ಇತಿಹಾಸ ರೂಪಿಸುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಹಿರಿಯ ಲೇಖಕಿ, ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಇವರಿಗೆ ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್​ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ವಹಿಸಿದ್ದರು. ಚೇಳಾೃರುಗುತ್ತು ಎಸ್​.ಆರ್​.ಹೆಗ್ಡೆ ಚಾರಿಟೇಬಲ್​ ಟ್ರಸ್ಟ್​ ಅಧ್ಯೆ ಡಾ. ಇಂದಿರಾ ಹೆಗ್ಡೆ ಉಪಸ್ಥಿತರಿದ್ದರು. ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿದರು. ಡಾ. ಅರುಣ್​ ಕುಮಾರ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net