

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಪೊಕ್ಕೂಳಂಡ್ರ, ಕುಯ್ಯಮುಡಿ, ದೇವಜನ ತಂಡಗಳು ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು.
ಶನಿವಾರದ ಮೊದಲ ಪಂದ್ಯದಲ್ಲಿ ಪೊಕ್ಕೂಳಂಡ್ರ ತಂಡ ಮರದಾಳು ತಂಡವನ್ನು ೩- ೦ ಗೋಲುಗಳಿಂದ ಮಣಿಸಿತು. ತಂಡದ ಪರ ವಿನೋದ್ ೩ ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮತ್ತೊಂದು ಪಂದ್ಯದಲ್ಲಿ ಕುಯ್ಯಮುಡಿ ಮತ್ತು ತಳೂರು ನಡುವಿನ ಪಂದ್ಯದಲ್ಲಿ ಕುಯ್ಯಮುಡಿ ತಂಡ ೫-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಜನದೀಶ್ ೨, ಚರಣ್ ೨ ನಿತೇಶ್ ೧ ಗೋಲು ದಾಖಲಿಸಿದರು.
ಬೆಪ್ಪುರನ ಮತ್ತು ಪೊಳಕಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಇತ್ತಂಡಗಳು ೧-೧ ಗೋಲು ದಾಖಲಿಸಿ ಸಮಬಲ ಸಾಧಿಸಿತು. ಪರಿಣಾಮ ಪೆನಾಲ್ಟಿ ಶೂಟೌಟ್‌ನಲ್ಲಿ ಪೊಳಕಂಡ್ರ ತಂಡ ೩-೧ ಗೋಲುಗಳಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಪಡಿಕಲ್ ತಂಡ ಮುಕ್ಕಾಟಿ(ಕೈಕೇರಿ) ತಂಡವನ್ನು ೫-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಮನೋಜ್ ೩, ಮಿಥುನ್ ಮತ್ತು ಲಿತೀನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ದಂಬೆಕೋಡಿ ಮತ್ತು ಪೊರೆಕುಂಜಿಲನ ನಡುವಿನ ಪಂದ್ಯದಲ್ಲಿ ದಂಬೆಕೋಡಿ ೪-೧ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ದಂಬೆಕೋಡಿ ಪರ ಕಾರ್ತಿಕ್ ಮತ್ತು ದಿವಿತ್ ತಲಾ ೨ ಗೋಲು ದಾಖಲಿಸಿದರೆ, ಪೊರೆಕುಂಜಿಲನ ತಂಡದ ಪರ ಸಚಿನ್ ಏಕೈಕ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಮೇರ್ಕಜೆ ಮತ್ತು ಕೇನೇರ ತಂಡಗಳು ಯಾವುದೇ ಗೋಲು ದಾಖಲಿಸದೇ ಇತ್ತಂಡಗಳು ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಮೇರ್ಕಜೆ ತಂಡ ೨-೦ ಗೋಳುಗಳಿಂದ ಮಣಿಸಿತು.
ದೇವಜನ ಮತ್ತು ತೆಕ್ಕಡೆ ತಂಡಗಳ ನಡುವಿನ ಪಂದ್ಯದಲ್ಲಿ ದೇವನಜನ ತಂಡ ೨-೦ ಗೋಲುಗಳಿಂದ ತೆಕ್ಕಡೆ ತಂಡವನ್ನು ಸೋಲಿಸಿತು. ತಂಡದಪರ ರಿಷಿಲ್, ಪುನೀತ್ ತಲಾ ೧ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪೊಳಕಂಡ್ರ ತಂಡವನ್ನು ಕುಯ್ಯಮುಡಿ ತಂಡ ೨-೦ ಗೋಲುಗಳಿಂದ ಮಣಿಸಿತು. ತಂಡದ ಪರ ನಿಶಾಂತ್ ೨ ಗೋಲು ದಾಖಲಿಸಿದರು.
ಪಡಿಕಲ್ ಮತ್ತು ದಂಬೇಕೋಡಿ ತಂಡಗಳ ನಡುವಿನ ಪಂದ್ಯದಲ್ಲಿ ಪಡಿಕಲ್ ತಂಡ ೫- ಗೋಲುಗಳಿಂದ ಮಣಿಸಿತು. ತಂಡದ ಪರ ಮನೋಜ್ ೪, ಗೌತಮ್ ಏಕೈಕ ಗೋಲು ದಾಖಲಸಿ ತಂಡದ ಗೆಲುವಿನ ರುವಾರಿಗಳಾದರು.
ಶನಿವಾರ ನಡೆದ ಪಂದ್ಯದಲ್ಲಿ ಪೊಕ್ಕೂಳಂಡ್ರ, ಕುಯ್ಯಮುಡಿ, ದೇವಜನ ಎಂಬ ೩ ತಂಡಗಳು ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು.