

ರಟ್ಟಿಹಳ್ಳಿ: ಬಹಿರ್ದೆಸೆಗೆ ಹೊರಗಡೆ ಹೋಗಿದ್ದ ಮಹಿಳೆ ಯಾವುದೋ ವಿಷಕಾರಿ ಹುಳು ಕಚ್ಚಿ ಮೃತಪಟ್ಟ ಟನೆ ತಾಲೂಕಿನ ಮಾವಿನತೋಪ ಗ್ರಾಮದಲ್ಲಿ ನಡೆದಿದೆ.
ಪ್ರೀತಿ ಶಶಿಕುಮಾರ ಗಾಣಿಗೇರ (25) ಮೃತ ಮಹಿಳೆ.
ಇವರು ರಾತ್ರಿ ಸಮಯದಲ್ಲಿ ಬಹಿರ್ದೆಸೆಗಾಗಿ ಮನೆಯಿಂದ ಹೊರಗಡೆ ಹೋಗಿದ್ದು ಈ ಸಮಯದಲ್ಲಿ ಯಾವುದೋ ವಿಷಕಾರಿ ಹುಳು ಕಚ್ಚಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.