ಮದ್ದೂರಿನಲ್ಲಿ ವಿಷ ಆಹಾರ ಸೇವಿಸಿ ಮೃತಪಟ್ಟ ರಾಸುಗಳು

poison feb 25 2020
Published on

ಮಂಡ್ಯ: ವಿಷ ಆಹಾರ ಸೇವಿಸಿದ ಪರಿಣಾಮ 2 ಎತ್ತು ಹಾಗೂ ಒಂದು ಹಸು ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.

ರೈತರಾದ ರವಿ, ಪ್ರೀತಮ್​ ಹಾಗೂ ಲೀಲಾ ಎಂಬುವವರಿಗೆ ಸೇರಿದ ರಾಸುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಮೃತಪಟ್ಟ ರಾಸುಗಳು ಅಂದಾಜು 1.20 ಲಕ್ಷ ರೂಪಾಯಿ ಮೌಲ್ಯ ಹೊಂದಿದ್ದವು.

ವಿಷ ಆಹಾರ ಸೇವಿಸಿದ ರಾಸುಗಳು ಒದ್ದಾಡುತ್ತಿದ್ದ ಕೂಡಲೇ ರೈತರು ಪಶು ವೈದ್ಯರಿಗೆ ಕರೆ ಮಾಡಿದರು. ವೈದ್ಯರ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅವುಗಳು ಮೃತಪಟ್ಟಿದ್ದವು. ಪಶುವೈದ್ಯ ಡಾ.ಗೋವಿಂದ ಹಾಗೂ ರಾಮ ಕೃಷ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಷ ಆಹಾರ ಸೇವಿಸಿ ಮೃತಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.

ರಾಸುಗಳಿಗೆ ಸರ್ಕಾರದಿಂದ ಸಿಗುವ ಪರಿಹಾರ ನೀಡುವಂತೆ ರೈತರು ಒತ್ತಾಯ ಮಾಡಿದ್ದಾರೆ. ಮದ್ದೂರು ಪೊಲೀಸರು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net