

ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಶನಿವಾರ ಚಿಣ್ಣರ ಹಬ್ಬ ಚಿಗುರು ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಚಿಗುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಗತ್ತೇ ಒಂದು ಸುಂದರವಾದ ತೋಟವಾದರೆ ಮಕ್ಕಳು ಅದರಲ್ಲಿರುವ ಪುಷ್ಪಗಳಿದ್ದಂತೆ. ಪುಷ್ಪಗಳು ಅರಳಬೇಕಾದರೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಬೇಕಿದೆ ಎಂದರು. ಬೆಳಗಾವಿ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಶ್ರೀರಂಗ ಜೋಶಿ, ಸುನೀತಾ ದೇಸಾಯಿ, ಸತ್ಯನಾರಾಯಣ, ರೋಹಿಣಿ ಗಂಗಾಧರಯ್ಯ, ಹೇಮಾ ಸುನೊಳ್ಳಿ ಇತರರು ಇದ್ದರು.