ಮನದ ಭಾವನೆಗಳಿಗೆ ಪದಗಳ ಬೆಸುಗೆ ಹಾಕಿದ ಕವಿಗಳು

Poets who fuse words to emotions
Published on

ಮಡಿಕೇರಿ:

ಕವಿಗಳನ್ನು ಸಮಾಜ ಗಮನಿಸುತ್ತಿರುತ್ತದೆ. ಹಾಗಾಗಿ ಕವನ ಬರೆಯುವವರು ಸಾಕಷ್ಟು ಹುಷಾರಾಗಿ ಇರಬೇಕು ಎಂದು ಸಾಹಿತಿ ಭಾರದ್ವಾಜ್ ಕೆ. ಆನಂದತೀಥ ಹೇಳಿದರು. ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಕುಶಾಲನಗರ ತಾಲೂಕು ಹಾರಂಗಿಯಲ್ಲಿ ಭಾನುವಾರ ಏರ್ಪಡಿಸಿದ್ದ ಗ್ರೀಷ್ಮಸಿರಿ ಕವಿಗೋಷ್ಠಿ ಅಂಗವಾಗಿ ಉಳುವಂಗಡ ಕಾವೇರಿ ಉದಯ ಅವರ ‘ಕಲ್ಪನೆಯ ಹನಿಗಳು’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಕವನಗಳ ರಚನೆ ಬಹಳ ಸುಲಭ ಎಂದು ಅಂದು ಕೊಳ್ಳುತ್ತೇವೆ. ಆದರೆ ಇದರಷ್ಟು ಅಪಾಯಕಾರಿ ಕೆಲಸ ಯಾವುದೂ ಇಲ್ಲ. ಕವನ ಬರೆಯುವಾಗ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕವನ ಬರೆಯುವವರಿಗೆ ಅದರ ಪರಿಣಾಮಗಳ ಅರಿವು ಇರಬೇಕು. ಬರೆಯುವವರು ಓದುವ ಹವ್ಯಾಸ ಹೊಂದಿರಬೇಕು. ಹೆಚ್ಚು ಹೆಚ್ಚು ಓದಿ ಕಡಿಮೆ ಬರೆಯಬೇಕು. ಬರೆದಿದ್ದನ್ನು ಪರಿಣಾಮಕಾರಿಯಾಗಿ ಬರೆಯಬೇಕು. ಶಬ್ದಗಳನ್ನು ಚೆಂದವಾಗಿ ಜೋಡಿಸುವುದು ಕೂಡ ಒಂದು ಕಲೆ. ಈ ಕಲೆ ಕವಿಗಳಿಗೆ ಇರಬೇಕು. ಕವನ ಬರೆದವರು ಅದನ್ನು ತಾವೇ ಒಮ್ಮೆ ಓದಬೇಕು. ನಂತರ ಅದನ್ನು ಒಳ್ಳೆಯ ವಿಮರ್ಶಕರಿಗೆ ಕೊಟ್ಟು ಸಲಹೆಗಳನ್ನು ಸಕರಾತ್ಮಕವಾಗಿ ಸ್ವೀಕರಿಸುವ ಗುಣ ಹೊಂದಿರಬೇಕು. ಯಾವುದೇ ವಿಷಯವನ್ನಾದರೂ ವಿಭಿನ್ನವಾಗಿ ಆಲೋಚಿಸಿ ಬರೆದಾಗ ಸುಂದರ ಕವನಗಳು ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹುಲುಗುಂದ ಗ್ರಾಮದಲ್ಲಿ ಹಾರಂಗಿ ಜಲಾಶಯ ನಿರ್ಮಾಣ ಆಗಲು ಪ್ರಧಾನ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಹೆಸರನ್ನು ಹಾರಂಗಿ ವೃತ್ತಕ್ಕೆ ನಾಮಕರಣ ಮಾಡಲು ಸ್ಥಳೀಯ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ ವರ್ತಮಾನದ ಲಾಭಗಳ ಬಗ್ಗೆ ಯೋಚಿಸದೇ ಭವಿಷ್ಯದ ಬಗ್ಗೆ ಚಿಂತಿಸಿ ಕಾರ್ಯನಿರ್ವಹಿಸುವವರೇ ಉತ್ತಮ ರಾಜಕಾರಣಿಗಳು. ಹಾರಂಗಿ ಜಲಾಶಯ ನಿರ್ಮಾಣದ ಯೋಜನೆ ರೂಪಿಸಿದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಈ ಸಾಲಿಗೆ ಸೇರಿದವರು. ಇಂಥ ವ್ಯಕ್ತಿಯ ಹೆಸರನ್ನು ಹಾರಂಗಿ ಅಣೆಕಟ್ಟೆ ಎದುರಿನ ವೃತ್ತಕ್ಕೆ ಇಡಲಾಗುವುದು. ಈ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾರಂಗಿಯಲ್ಲಿ ವೀರೇಂದ್ರ ಪಾಟೀಲ ಸ್ಮಾರಕ ನಿರ್ಮಾಣಕ್ಕೂ ಪ್ರಯತ್ನ ನಡೆಸಲಾಗುವುದು ಎಂದರು.

ಉಳುವAಗಡ ಕಾವೇರಿ ಉದಯ ಅವರ ‘ಕಲ್ಪನೆಯ ಹನಿಗಳು’ ಕವನ ಸಂಕಲನವನ್ನು ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಂಡ್ರAಗಿ ನಾಗರಾಜ್ ಪರಿಚಯಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ನಿವೃತ್ತ ಉಪನ್ಯಾಕಿಯರಾದ ಎ.ಎಸ್. ಪೂವಮ್ಮ, ತಿಲೋತ್ತಮೆ ನಂದಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೆ.ಎಸ್. ಕೃಷ್ಣೇಗೌಡ ಮತ್ತಿತರರು ಇದ್ದರು.

ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ 13 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net