

ಮಡಿಕೇರಿ:
ಅ.5ರಿಂದ 10ರ ತನಕ ನಡೆದ ಜಗದ್ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಪಂಚ ಕಾವ್ಯೋತ್ಸವ ಕವಿಗೋಷ್ಠಿಯಲ್ಲಿ ಕೊಡಗಿನ ಎಂಟು ಕವಿಗಳು ಪಾಲ್ಗೊಂಡು ತಮ್ಮ ಕವನಗಳನ್ನು ವಾಚಿಸಿದರು.
ವೈಲೇಶ ಪಿ.ಎಸ್. ಕೊಡಗು, ಉಳುವಂಗಡ ಕಾವೇರಿ ಉದಯ, ಲೀಲಾಕುಮಾರಿ ತೊಡಿಕಾನ, ಕೃಪಾ ದೇವರಾಜ್ ಹಾಗೂ ಹೇಮಂತ್ ಪಾರೇರಾ ಮೊದಲ ದಿನದ ಸಮರಸ ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚಿಸಿದರೆ, ನಾಲ್ಕನೆಯ ದಿನದ ಸಮಷ್ಠಿ(ಬಹುಭಾಷಾ) ಕವಿಗೋಷ್ಠಿಯಲ್ಲಿ ಕೊಡಗಿನ ಕೊಡವ ಭಾಷಾ ಪ್ರತಿನಿಧಿಯಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಕೊಡಗಿನ ಬ್ಯಾರಿ ಭಾಷೆಯ ಪ್ರತಿನಿಧಿಯಾಗಿ ಮುನೀರ್ ಅಹಮದ್ ಹಾಗೂ ಕೊಡಗಿನ ಅರೆಭಾಷಾ ಪ್ರತಿನಿಧಿಯಾಗಿ ರೇವತಿ ರಮೇಶ್ ಭಾಗವಹಿಸಿ ಕವನ ವಚನ ಮಾಡಿದರು.
ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ನಡೆದ ಕವಿಗೋಷ್ಠಿಯನ್ನು ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. ಡಾ. ಬಂಜಗೆರೆ ಜಯಪ್ರಕಾಶ್ ವಿಶೇಷ ಅತಿಥಿಗಳಾಗಿ ಮತ್ತು ಪ್ರಣತಿ ಆರ್ ಗಡಾದ ಚಿಗುರು ಅತಿಥಿಗಳಾಗಿ ಭಾಗವಹಿಸಿದ್ದರು.