ಕೃತಿಗಳ ಮೂಲಕ ಕವಿಗಳು ಸದಾ ಜೀವಂತ

book release
Published on

ಮೈಸೂರು: ಕೃತಿಗಳ ಮೂಲಕ ಕವಿಗಳು ಸದಾ ಜೀವಂತವಾಗಿರುತ್ತಾರೆ ಎಂದು ವಿಜಯವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ನಗರದ ಸರಸ್ವತಿಪುರಂ ವಿಜಯವಿಠಲ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ರಚನೆಯ ‘ಭಾವ ಶರದಿ’ ಕವನ ಸಂಕಲನ ಕುರಿತು ಮಾತನಾಡಿದರು.

ವರಲಕ್ಷ್ಮೀ ಮಂಜುನಾಥ್ ಗದ್ಯ ಹಾಗೂ ಪದ್ಯ ಎರಡಲ್ಲೂ ಸಾಹಿತ್ಯ ರಚಿಸಿದ್ದಾರೆ. ಅವರ ಕವನಗಳಲ್ಲಿ ನವರಸ ಇದೆ. ಆರೋಗ್ಯ, ಪರಿಸರ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾಮಾಜಿಕ ಕಾಳಜಿಯಿಂದಲೇ ಬರೆದಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ಅವರ ಆಳವಾದ ಅಧ್ಯಯನ, ಅಸಾಮಾನ್ಯ ಗ್ರಹಣಾಶಕ್ತಿ, ಎಲ್ಲ ಲೇಖನಗಳಲ್ಲೂ ಗೋಚರವಾಗುತ್ತದೆ. ನಮ್ಮ ಮಹಾಪುರುಷರು, ಹಬ್ಬ ಹರಿದಿನಗಳು, ಸಂಸ್ಕೃತಿಯ ಬಗ್ಗೆ ತಿಳಿಯಬಹುದು ಎಂದರು.

ಜೀವನರಾಗ- ಕಥಾ ಸಂಕಲನ ಕುರಿತು ನಂಜನಗೂಡು ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೊತ್ತಲವಾಡಿ ಶಿವಕುಮಾರ್ ಮಾತನಾಡಿ, ಜನಪ್ರಿಯತೆಗಿಂತ ಜನಮನ್ನಣೆ ಪಡೆಯುವುದು ಮುಖ್ಯ. ಏಕೆಂದರೆ ಜನಪ್ರಿಯತೆ ಹೋಗುತ್ತದೆ. ಆದರೆ ಜನಮನ್ನಣೆ ಉಳಿಯುತ್ತದೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಲಯ ಪ್ರಮುಖ್ ಡಾ.ವಿ. ರಂಗನಾಥ್, ಜಿಲ್ಲಾಧ್ಯಕ್ಷ ಎಸ್. ಸುಬ್ರಹ್ಮಣ್ಯ, ಲೇಖಕಿ ವರಲಕ್ಷ್ಮೀ ಮಂಜುನಾಥ್,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net