ಪದ್ಯ ವಾಚನ ಸ್ಪರ್ಧೆ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಲಿಯಂ ಶೇಕ್ಸ್​ಪಿಯರ್​ ಜನ್ಮದಿನ ನಿಮಿತ್ತ ನಗರದ ಕೆ.ಇ. ಬೋರ್ಡಿನ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಮತ್ತು ಆಂಗ್ಲ ಭಾಷಾ ವಿಭಾಗ ವತಿಯಿಂದ ಏ. 23ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಅಂತರ ಕಾಲೇಜು ಆಂಗ್ಲ ಪದ್ಯ ವಾಚನ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರತಿ ಕಾಲೇಜಿನಿಂದ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಭಾಗವಹಿಸಿದವರಿಗೆ ಪ್ರಮಾಣಪತ್ರ ಹಾಗೂ ಮೊದಲ ಮೂರು ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು. ಕಾಲೇಜು ಸಮವಸ್ತ್ರ ಧರಿಸಿರಬೇಕು, ಗುರುತಿನ ಚೀಟಿ ಜತೆಗೆ ಸಂಸ್ಥೆಯಿಂದ ಅನುಮತಿ ಪತ್ರ ತರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net