ಪ್ರಾಸ, ಗಣ ಅಳವಡಿಸಿದರೆ ಪದ್ಯ ಸೊಗಸು: ಚಂದ್ರಶೇಖರ ಶೇಟ್ ಹೇಳಿಕೆ

Kkd_Poetry
Published on

ಛಂದಸ್ಸು ಪರಿಚಯಾತ್ಮಕ ಕಾರ್ಯಾಗಾರ ಕೊಕ್ಕಡ: ಕನ್ನಡ ಭಾಷೆಯಲ್ಲಿ ಪದ್ಯ ರಚಿಸುವಾಗ ಅದರದೇ ಆದ ಕೆಲವು ನಿಯಮಗಳಿದ್ದು, ಪದ್ಯದ ರಚನಾ ನಿಯಮ ತಿಳಿಸುವ ಶಾಸ್ತ್ರ ಛಂದಸ್ಸಾಗಿದೆ. ವಿದ್ಯಾರ್ಥಿಗಳು ಪದ್ಯ ರಚಿಸುವಾಗ ಛಂದಸ್ಸಿನಲ್ಲಿ ಬರುವಂತಹ ಪ್ರಾಸ, ಗಣಗಳು ಸೇರಿದಂತೆ ಇತರ ವಿಚಾರ ಅಳವಡಿಸಿಕೊಂಡಾಗ ಅಂತಹ ಪದ್ಯಗಳು ವಿಶೇಷ ಮಹತ್ವ ಪಡೆಯುತ್ತವೆ ಎಂದು ಪಟ್ಟೂರು ಶ್ರೀರಾಮ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ಹೇಳಿದರು.

ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಛಂದಸ್ಸು, ಪರಿಚಯಾತ್ಮಕ ವಿವರ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ಕನ್ನಡ ವಿಭಾಗ ಶಿಕ್ಷಕಿ ಸುಪ್ರಿತಾ ಎ., ಸ್ವಾತಿ ಕೆ.ವಿ. ವಿದ್ಯಾರ್ಥಿಗಳಿಗೆ ಛಂದಸ್ಸು, ಮಾತ್ರಗಣ, ಕಂದ ಪದ್ಯಗಳ ಚಟುವಟಿಕೆ ಮೂಲಕ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net