ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಈ ವರ್ಷದ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಗಾಗಿ ಹುಬ್ಬಳ್ಳಿಯ ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯು ಕವನ ಸಂಕಲನಗಳನ್ನು ಆಹ್ವಾನಿಸಿದೆ.
ಕವನ ಸಂಕಲನವು 2023 ಮತ್ತು 2024ರಲ್ಲಿ ಮೊದಲ ಬಾರಿ ಪ್ರಕಟವಾಗಿರಬೇಕು. ಅನುವಾದಿತ ಕೃತಿಯಾಗಿರಬಾರದು ಮತ್ತು ಈ ಮೊದಲು ಯಾವುದೇ ಪ್ರಶಸ್ತಿ ಪಡೆದುದಾಗಿರಬಾರದು. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಆಯ್ಕೆ ಸಮಿತಿಯಿಂದ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟ ಕೃತಿಯ ರಚನಾಕಾರರಿಗೆ ನವೆಂಬರ್ನಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಎಂ.ಎ. ಸುಬ್ರಮಣ್ಯ ತಿಳಿಸಿದ್ದಾರೆ.
ಕವನ ಸಂಕಲನದ 2 ಪ್ರತಿಗಳನ್ನು ಜೂನ್ 10ರೊಳಗೆ ‘ಕಾವ್ಯ ಪ್ರಶಸ್ತಿಗಾಗಿ’ ಎಂದು ನಮೂದಿಸಿ ‘ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020’ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.