ಕಾವ್ಯಾಸಕ್ತಿಯಿಂದ ಆರೋಗ್ಯಪೂರ್ಣ ಮನಸ್ಥಿತಿ

mkg
Published on

ಚನ್ನಗಿರಿ: ಕಾವ್ಯಾಸಕ್ತಿಯಿಂದ ಆರೋಗ್ಯ ಪೂರ್ಣ ಸಮಾಜದ ಚಿಂತನೆ ಸಾಧ್ಯವಿದ್ದು, ಕಾವ್ಯದ ಆಸಕ್ತಿ ಬೆಳೆಸಿಕೊಂಡವರು ಆರೋಗ್ಯಪೂರ್ಣ ಮನಸ್ಥಿತಿ ಹೊಂದಿರುತ್ತಾರೆ ಎಂದು ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಸಿ.ವಿ. ತಿರುಮಲರಾವ್ ತಿಳಿಸಿದರು.

ಇಲ್ಲಿನ ನಿವೃತ್ತ ನೌಕರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಶ್ರಾವಣ ಮಾಸದ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶುಕ್ರವಾರ ಮಾತನಾಡಿದರು.

ಕಾವ್ಯಕ್ಕೆ ಮನುಷ್ಯನ ಮಾನಸಿಕ ಚಿಂತನೆ ಹಾಗೂ ಆರೋಗ್ಯ ಕಾಪಾಡುವಂತಹ ಶಕ್ತಿ ಇದೆ. ಕಾವ್ಯ ಅನೇಕ ರೂಪಕಗಳ ಮೂಲಕ ಹುಟ್ಟುತ್ತದೆ. ಅದು ಮನುಷ್ಯತ್ವದ ಬಗ್ಗೆ ಮಾತನಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಮಾತನಾಡಿ, ಸಾಹಿತ್ಯ ಪರಿಷತ್ ಹೊಸ ಬರಹಗಾರರನ್ನು ಕೈಬೀಸಿ ಕರೆಯುವ ವೇದಿಕೆಯಾಗಿದೆ. ಆದರೆ, ಎಲ್ಲರೂ ಸಾಹಿತಿ ಅಗಲು ಸಾಧ್ಯವಿಲ್ಲ ಎಂದರು.

ಅಣ್ಣೋಜಿರಾವ್, ಮಲ್ಲಿಕಾರ್ಜುನ, ಲೋಕೇಶ್ವರಯ್ಯ, ನಾಗೇಶ್‌ನಾಯ್ಕ, ಕಶ್ಯಪ್, ಸಿದ್ದೇಶ್ ಹಿರೇಮಠ ಅವರು ಕಾವ್ಯ ವಾಚನ ಮಾಡಿದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಕಸಬಾ ಹೋಬಳಿ ಅಧ್ಯಕ್ಷ ಚಿನ್ನಸ್ವಾಮಿ, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net