ಕಾವ್ಯದಲ್ಲಿದೆ ಶೋಷಿತರ ಬದುಕಿನ ಒಳನೋಟ

23-msk-1
Published on

ಮಸ್ಕಿ: ಸಾರಸ್ವತ ಲೋಕದ ದಿಗ್ಗಜ ಜಂಬಣ್ಣ ಅಮರಚಿಂತ ನೊಂದವರ ಧ್ವನಿಯಾಗಿದ್ದರು. ಅಮರಚಿಂತ ಅವರ ಕಾವ್ಯದಲ್ಲಿ ಶೋಷಿತರ ಬದುಕಿನ ಒಳನೋಟಗಳಿದ್ದು, ಅವರು ಭೌತಿಕವಾಗಿ ನಮ್ಮೊಂದಿಲ್ಲಗಿಲ್ಲದಿದ್ದರೂ ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆ ಎಂದು ಸಾಹಿತಿ ಸಿ.ದಾನಪ್ಪ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಭಂಡಾರ ಪ್ರಕಾಶನದಿಂದ ಆಯೋಜಿಸಿದ್ದ ಕವಿ ಜಂಬಣ್ಣ ಅಮರಚಿಂತ ಅವರ ಸಾಹಿತ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಉಪನ್ಯಾಸಕ ಮಹಾಂತೇಶ ಮಸ್ಕಿ ಮಾತನಾಡಿ, ಜಂಬಣ್ಣ ಅಮರಚಿಂತ ನೋವುಂಡವರ ಪ್ರೇಮ ಕವಿಯಾಗಿದ್ದಾರೆ ಎಂದು ಬಣ್ಣಿಸಿದರು. ರೂಪಕಗಳ ಮೂಲಕ ಸಮಾಜದ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ ಎಂದು ಅವರ ಕವಿತೆಗಳನ್ನು ಓದುವ ಮೂಲಕ ಹೇಳಿದರು.

ಡಾ.ಎ.ಎನ್.ಸಂದೇಶ ಅವರ ನೆಲದ ಅಸ್ಮಿತೆ ಮತ್ತು ಅಂತಃಸತ್ವ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ.ಸೈಯದ್ ಮುಜೀಬ್ ಅಹ್ಮದ್, ಡಾ.ಎ.ಎನ್.ಸಂದೇಶ, ಭಂಡಾರ ಪ್ರಕಾಶನದ ಪರಶುರಾಮ ಕೊಡಗುಂಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net