

ಹುಬ್ಬಳ್ಳಿ: ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಜೀವನದಲ್ಲಿ ಸಲತೆ ಸಾಧಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಕನ್ನಡ ವಿಭಾಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಗಿರಿಜಾ ಸಂಗೊಳ್ಳಿ ಅವರ ಒಡಲ ಮಿಡಿತ ಕವನ ಸಂಕಲನದ ವಿಮರ್ಶೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ವಿಷಯ ಉಪನ್ಯಾಸದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಸಂಬಂಧಗಳು ಕಳೆದು ಹೋಗುತ್ತಿರುವ ಈ ಸಂದರ್ಭದಲ್ಲಿ ಲೋಕದ ವಿದ್ಯಮಾನಗಳು ಕಾವ್ಯಗಳಲ್ಲಿ ಬರಬೇಕು. ಲೇಖಕರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಬರಹದ ಮೂಲಕ ಪ್ರಕಟಿಸಬೇಕು ಎಂದರು.
ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಅವರು, ವಿದ್ಯಾರ್ಥಿಗಳು ಭಾಷಾ ರಚನೆ ಕಲಿಯಬೇಕು. ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ನಿರಂತರವಾಗಿ ಓದಬೇಕು ಎಂದರು.
ಸಾಹಿತಿ ಸುನಂದಾ ಕಡಮೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಡಾ. ಲಿಂಗರಾಜ ಅಂಗಡಿ, ಪದವಿಪೂರ್ವ ಪ್ರಾಚಾರ್ಯ ನಿರ್ಮಲಾ ಅಣ್ಣಿಗೇರಿ ಮಾತನಾಡಿದರು. ಪದವಿ ಪ್ರಾಚಾರ್ಯ ಸುಮಂಗಲಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕವಿಯಿತ್ರಿ ಗಿರಿಜಾ ವಿ. ಸಂಗೊಳ್ಳಿ ಹಾಗೂ ವಿ.ಎನ್. ಸಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಐ. ಹರಕುಣಿ ಸ್ವಾಗತಿಸಿದರು, ಸುಷ್ಮಾ ಸಂಗೊಳ್ಳಿ ಪ್ರಾರ್ಥಿಸಿದರು, ಡಾ. ಎಸ್.ಬಿ. ಬೆಟಗೇರಿ, ಭರಮವ್ವ ಭಂಗಿ ಪರಿಚಯಿಸಿದರು. ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು. ಕೆ. ಗಂಗಾಧರ ಪ್ರಾಸ್ತಾವಿಕ ಮಾತನಾಡಿದರು. ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿದ್ಯಾ ವಂಟಮೂರಿ ವಂದಿಸಿದರು.