ಕಾವ್ಯ ರಚನೆಗೆ ಅನುಭವದ ಹಿನ್ನೆಲೆ ಬೇಕು

Poetry creation needs background of experience
ರಬಕವಿಯ ಈರಣ್ಣ ತೇರಣಿ ಅವರ ಮನೆಯಂಗಳದಲ್ಲಿ ನಡೆದ ಪುಸ್ತಕಾವಲೋಕನ -29 ಕಾರ್ಯಕ್ರಮದಲ್ಲಿ ವಿಜಯಪುರದ ಹಿರಿಯ ಕವಿ ಪ್ರೊ. ದೊಡ್ಡಣ್ಣ ಭಜಂತ್ರಿ ಅವರ ಒಲೆಯ ಹೊಕ್ಕು ಕಾವ್ಯಕತಿಯನ್ನು ಹಿರಿಯ ಸಾಹಿತಿ ದೇವೇಂದ್ರ ಬಿಸ್ವಾಗರ ಅವಲೋಕಿಸಿದರು.
Published on

ರಬಕವಿ-ಬನಹಟ್ಟಿ: ಶ್ರಮಿಕ ಕುಟುಂಬದ ಹಿನ್ನೆಲೆಯಿಂದ ಬಂದ ದೊಡ್ಡಣ್ಣ ಭಜಂತ್ರಿ ಅವರು ಕಡುಬಡತನವನ್ನೇ ಹಾಸಿ ಹೊದ್ದು ಮಲಗಿದವರು. ದಲಿತ, ಬಂಡಾಯ ಸಾಹಿತ್ಯವನ್ನು ಅವಲೋಕಿಸುತ್ತ ಬರೆದವರು. ಅವರ ಕಾವ್ಯ ಕಲಾ ಕೌಶಲ ಗಮನಾರ್ಹವಾದುದು. ಕವಿ ಅನುಭವದ ಹಿನ್ನೆಲೆಯಲ್ಲಿ ಕಾವ್ಯ ರಚಿಸುತ್ತಾನೆ ಎಂದು ಮಹಾಲಿಂಗಪುರದ ಹಿರಿಯ ಸಾಹಿತಿ ದೇವೇಂದ್ರ ಬಿಸ್ವಾಗರ ಹೇಳಿದರು.

ರಬಕವಿಯ ಬಸವ ನಗರದ ಚಿತ್ರಕಲಾ ಶಿಕ್ಷಕ ಈರಣ್ಣ ತೇರಣಿ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ, ತೇರದಾಳ, ಮಹಾಲಿಂಗಪುರ ವಲಯಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-29 ಕಾರ್ಯಕ್ರಮದಲ್ಲಿ ವಿಜಯಪುರದ ನಿವತ್ತ ಪ್ರಾಚಾರ್ಯ ಪ್ರೊ. ದೊಡ್ಡಣ್ಣ ಭಜಂತ್ರಿ ಅವರ ಒಲೆಯ ಹೊಕ್ಕು ಕತಿ ಅವಲೋಕಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಕತಿಯಲ್ಲಿ ವೈವಿಧ್ಯಮಯ 52 ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ಅವರ ಗಟ್ಟಿ ಬರಹ ಸಾಹಿತ್ಯದ ಹೊಲದಲ್ಲಿ ದಟ್ಟವಾಗಿ ನಾಟಿಯಾಗಿ ಬೇರೂರಿವೆ ಎಂದರು.

ಹಿರಿಯ ಜಾನಪದ ಕಲಾವಿದ ಬಸವರಾಜ ತೇರಣಿ ಅಧ್ಯಕ್ಷತೆ ವಹಿಸಿದ್ದರು. ಮಹಾಶಾಂತ ಶೆಟ್ಟಿ, ಮಹಾದೇವ ಕವಿಶೆಟ್ಟಿ ಅವಲೋಕನದಲ್ಲಿ ಸಂವಾದ ನಡೆಸಿದರು. ಕತಿಕಾರ ಪ್ರೊ. ದೊಡ್ಡಣ್ಣ ಭಜಂತ್ರಿ ಸನ್ಮಾನ ಸ್ವೀಕರಿಸಿ ಒಲೆಯ ಹೊಕ್ಕು ಇದು ನೋವುಗಳನ್ನು ಅನುಭವಿಸಿದ ಸಂಕೇತ. ಕವಿ ಭಾವಲೋಕದಲ್ಲಿ ಮಿಂದು ಬರೆಯುತ್ತಾನೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಮ.ಕ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಈರಣ್ಣ ತೇರಣಿ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.

ಹಿರಿಯ ಸಾಹಿತಿ ಶಿವಾನಂದ ದಾಶಾಳ, ಮಲ್ಲೇಶಪ್ಪ ಕುಚನೂರ, ಇಂದುಧರ ಬೆಳಗಲಿ, ಡಿ. ಬಿ. ಜಾಯಗೊಂಡ, ಶರತ್ ಜಂಬಗಿ, ರವೀಂದ ್ರಅಷ್ಟಗಿ, ಪ್ರಕಾಶ ಸಿಂಗನ್, ಸವಿತಾ ಹೊಸೂರ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net