

ಹುಬ್ಬಳ್ಳಿ: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಅಂಗವಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ನಾಡಿನ ಹಿರಿಯ -ಕಿರಿಯ ಕವಿಗಳು ನಾಡು, ನುಡಿ ಕನ್ನಡ ಹಿರಿಮೆ ಕುರಿತು ಬರೆದ ಕವನಗಳ ಸಂಕಲನ ಸ್ವಯಂ ಸೇವಾ ಯೋಜನೆಯಡಿ ಪ್ರಕಟಿಸಿ ಹೊರತರಲು ನಿರ್ಧರಿಸಿದೆ.
ಆಸಕ್ತರು, ಇಪ್ಪತ್ತು ಸಾಲುಗಳಲ್ಲಿ ಬರೆದ ಒಂದು ಕವನವನ್ನು, ಕಿರುಪರಿಚಯ ಹಾಗೂ ಭಾವಚಿತ್ರದೊಂದಿಗೆ ಸೆ. 18ರೊಳಗೆ ಕಳಿಸುವಂತೆ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ಕೋರಿದ್ದಾರೆ.