

ವಿಜಯವಾಣಿ ಸುದ್ದಿಜಾಲ ಧಾರವಾಡ
ರವಿದಾಸ ಪ್ರಕಾಶನ ಹಾಗೂ ದಿ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ವತಿಯಿಂದ ವಿದ್ಯಾ ಕದಂ ಅವರ "ಬರ್ತಿಯೇನ ಗೆಳತಿ' ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಏ. 18ರಂದು ಬೆಳಗ್ಗೆ 11 ಗಂಟೆಗೆ ಬಾಳೆಕುಂದ್ರಿ ಭವನದಲ್ಲಿ ಆಯೋಜಿಸಲಾಗಿದೆ.
ಹಿರಿಯ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಕೃತಿ ಬಿಡುಗಡೆ ಮಾಡುವರು. ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಇತಿಹಾಸ ತ ಡಾ. ಲಕ್ಷ್ಮಣ ತೆಲಗಾವಿ, ಕೆ.ಎಲ್.ರಾಜಶೇಖರ ಮತ್ತು ರವಿದಾಸ ಪ್ರಕಾಶನದ ಗಂಗಮ್ಮ ಸುರೇಶ ಭಂಡಾರಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.