ಕವನ ಸಂಕಲನ ಬಿಡುಗಡೆ ಇಂದು

WhatsApp Image 2024-05-09 at 19.36.02
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಲೀಲಾತಾಯಿ ಜೀವಣ್ಣಗೌಡ ಪಾಟೀಲ ಕುಲಕಣಿರ್ ದತ್ತಿ ನಿಮಿತ್ತ ಮೇ 11ರಂದು ಸಂಜೆ 6 ಗಂಟೆಗೆ ಸಂದ ರಾ.ಹ. ದೇಶಪಾಂಡೆ ಭವನದಲ್ಲಿ ಸರೋಜಾ ಕುಲಕಣಿರ್ ಅವರ "ಆಳ' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದೆ.
ಕರ್ನಾಟಕ ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದಶಿರ್ ಜಿ.ಸಿ. ತಲ್ಲೂರ ಕವನ ಸಂಕಲನ ಬಿಡುಗಡೆ ಮಾಡುವರು. ಪ್ರೊ. ದುಷ್ಯಂತ ನಾಡಗೌಡ ಕೃತಿ ಕುರಿತು ಮಾತನಾಡುವರು. ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ. ಎಂ.ವೈ. ಸಾವಂತ ಅತಿಥಿಯಾಗಿ ಆಗಮಿಸುವರು. ಸಾಹಿತಿ ನರಸಿಂಹ ಪರಾಂಜಪೆ ಅವರು ಸನ್ಮಾನ ಸ್ವೀಕರಿಸುವರು. ದತ್ತಿದಾನಿ ಸರೋಜಾ ಕುಲಕಣಿರ್ ಉಪಸ್ಥಿತರಿರುವರು. ಸಂದ ಕಾರ್ಯಾಧ್ಯ ಬಸವಪ್ರಭು ಹೊಸಕೇರಿ ಅಧ್ಯತೆ ವಹಿಸುವರು ಎಂದು ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net