ಕವಿ-ಕಾವ್ಯ ಸಂವಾದ, ಅಭಿಪ್ರಾಯ ಮಂಡನೆಗೆ ಸೂಕ್ತ ವೇದಿಕೆ

Gangavati Poet poetry conversation
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕವಿ-ಕಾವ್ಯ ಸಂವಾದದಲ್ಲಿ ಯುವ ಕವಯತ್ರಿ ಲಕ್ಷ್ಮೀ ್ಮಮಾನಸ ಮಾತನಾಡಿದರು.
Published on

ಗಂಗಾವತಿ: ವಿದ್ಯಾರ್ಥಿಗಳಲ್ಲಿ ಕವಿ ಮತ್ತು ಕೃತಿಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮುಕ್ತ ಚರ್ಚೆಗೆ ಪ್ರೇರಣೆಯಾಗಿದೆ ಎಂದು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಮುಮ್ತಾಜ್ ಬೇಗಂ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕವಿ-ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ಮತ್ತು ಕಿರಿಯ ಕವಿಗಳ ಕಾವ್ಯದ ಕುರಿತು ಚರ್ಚಿಸಲಾಗುತ್ತಿದ್ದು, ಕವಿಯೊಂದಿಗೆ ಸಂವಾದಿಸುವ ವಿಶಿಷ್ಟ ಪರಿಕಲ್ಪನೆಯಾಗಿದೆ. ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆಗೆ ಸೂಕ್ತ ವೇದಿಕೆ ಎಂದರು.

ಯುವ ಕವಯತ್ರಿ ಲಕ್ಷ್ಮೀ ಮಾನಸ ಮಾತನಾಡಿ, ಕಾವ್ಯ ಅಂತರಂಗದ ಅಭಿವ್ಯಕ್ತಿ. ಕವಿತೆ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಕಟ್ಟುತ್ತದೆ. ಕಡಲಿನಷ್ಟು ನೋವು ನಲಿವುಗಳು ಮಾನವನನ್ನು ಕಾಡುತ್ತವೆ. ಕವಿತೆ ನನ್ನೊಳಗಿನ ದುಗುಡಗಳನ್ನು ಹೊರಹಾಕಲು ಮಾಧ್ಯಮವಾಗಿದೆ ಎಂದರು.

ಕವಯಿತ್ರಿ ಲಕ್ಷ್ಮೀ ಮಾನಸ ಅವರ ಅಳಲು ಅಲೆಗಳು ಕವನ ಸಂಕಲನ ಕುರಿತು ಸಂವಾದ ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕ ಪವನಕುಮಾರ ಗುಂಡೂರು, ಪಿಜಿ ವಿದ್ಯಾರ್ಥಿ ಪ್ರತಿನಿಧಿಗಳಾದ ಹೀನಾ, ವಿನಾಯಕ, ಹಳ್ಳದ ಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net