

ಹೊಸನಗರ: ಕನ್ನಡದ ವೇದವ್ಯಾಸ ಎನಿಸಿದ ಕೊಡಚಾದ್ರಿಯ ಅಭಿನವ ಪಂಪ, ತುರಂಗ ಭಾರತ ಎಂಬ ಮಹಾಕೃತಿ ರಚಿಸಿದ ಕವಿ ಪರಮದೇವನನ್ನು ಮರೆತಿರುವುದು ದುರಂತ. ಹೊಸನಗರ ತಾಲೂಕಿನ ನಿಟ್ಟೂರಿನ ಸುಳುಗೋಡು ಎಂಬ ಹಳ್ಳಿಯಲ್ಲಿ ಹುಟ್ಟಿ ಬದುಕಿದ್ದರು ಎನ್ನುವುದೇ ಹೆಮ್ಮೆಯ ಸಂಗತಿ ಎಂದು ಕಲಾದರ್ಶನ ಮಾಸ ಪತ್ರಿಕೆ ಪ್ರಧಾನ ಸಂಪಾದಕ ಡಾ. ಹಾದಿಗಲ್ಲು ಲಕ್ಷಿ÷್ಮÃನಾರಾಯಣ ಹೇಳಿದರು.
ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಿಟ್ಟೂರಿನ ರಾಮೇಶ್ವರ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕವಿ ಪರಮದೇವ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ಅಭಿರುಚಿ ಬಳಗದ ಕುಮಾರ ಶಾಸ್ತಿç ಮಾತನಾಡಿ, ಪರಮದೇವ ತುರಂಗಲಯದಲ್ಲಿ ಬರೆದಿರುವ ಪದ್ಯಗಳು ವಿಶಿಷ್ಟವಾಗಿವೆ. ತುರಂಗಲಯದಲ್ಲಿ ಬರೆದ ಕಾರಣ ತುರಂಗ ಭಾರತವೆಂಬ ಹೆಸರು ಬಂದಿದೆ. ಇದರಲ್ಲಿ ವ್ಯಾಸಭಾರತದಲ್ಲಿರುವ ಮತ್ತು ಇತರ ಜಾನಪದದಲ್ಲಿದ್ದ ಕಥಾನಕಗಳೂ ಅಡಕವಾಗಿವೆ. ಇದೊಂದು ಕನ್ನಡದ ವಿಶಿಷ್ಟ ಕಾವ್ಯ. ಪರಮದೇವ 52 ಶ್ಲೋಕಗಳ ನಾರಾಯಣಾಕ್ಷಾರ ಮಾಲಿಕ ಸ್ತೋತ್ರ ಎಂಬ ಕಿರುಹೊತ್ತಗೆಯನ್ನೂ ತತ್ವ ಚೌಪದಿ ಎಂಬ 54 ಪದ್ಯಗಳ ಅದ್ವೆÊತ ತತ್ವವನ್ನು ಪ್ರತಿಪಾದಿಸುವ ಪುಸ್ತಕವನ್ನೂ ಬರೆದಿದ್ದಾನೆ. ಇದಲ್ಲದೆ ಅನೇಕ ಕೀರ್ತನೆಗಳನ್ನೂ ರಚಿಸಿದ್ದು, ಅದನ್ನು ಜಗನ್ನಾಥ ಶಾಸ್ತಿçಗಳು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ ಎಂದರು.
ಸಾಹಿತಿ ಡಾ. ಶಾಂತಾರಾಮ ಪ್ರಭು ಮಾತನಾಡಿ, 300 ವರ್ಷಗಳಿಗೂ ಹಿಂದೆ ಶಾಲಾ ಕಾಲೇಜುಗಳಿಲ್ಲದ ಕಾಲದಲ್ಲಿ ಕುಗ್ರಾಮದಲ್ಲಿ ಹುಟ್ಟಿದ ಪರಮದೇವ ತುರಂಗ ಭಾರತ ಎಂಬ ಷಟ್ಪದಿ ಕಾವ್ಯ ರಚಿಸಿರುವುದೇ ಅದ್ಭುತ. 1986 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮಗ್ರ ತುರಂಗ ಭಾರತವನ್ನು ಪ್ರಕಟಿಸಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ತುರಂಗ ಭಾರತದ ಬಗ್ಗೆ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ತಾವೇ ಅದರ ಕುರಿತು ಮಾತನಾಡುವುದಾಗಿಯೂ ತಿಳಿಸಿದ್ದರು. ಆದರೆ ಅದೇಕೋ ಆಗಲಿಲ್ಲ. ಇತ್ತೀಚೆಗೆ ಅಗ್ನಿ ಸೇವಾ ಟ್ರಸ್ಟ್ನವರು ತುರಂಗ ಭಾರತವನ್ನು ಐದು ಸಂಪುಟಗಳಲ್ಲಿ ಪ್ರಕಟಿಸಿ ಪ್ರತಿಗಳು ದೊರೆಯುವಂತೆ ಮಾಡಿದ್ದಾರೆ. ಇಂತಹ ಮೇರು ಕವಿಗಳು ನಮ್ಮ ನಾಡಿನಲ್ಲಿ ಇದ್ದಾರೆಂಬುದೇ ಹೆಮ್ಮಯ ವಿಷಯ. ಶಾಲಾ ಕಾಲೇಜುಗಳಲ್ಲಿ ಇದರ ಪರಿಚಯ ಮಾಡಿಕೊಡಬೇಕು. ಜತೆಗೆ ಹುಟ್ಟಿದ ಊರಲ್ಲಾದರೂ ಕಾವ್ಯ ವಾಚನ, ವ್ಯಾಖ್ಯಾನಗಳು ನಿರಂತರ ನಡೆಯಬೇಕು ಎಂದು ಆಶಿಸಿದರು.
ಪರಮದೇವನ ಕುಟುಂಬದ ಪರವಾಗಿ ಡಿ.ಪಿ.ಕೃಷ್ಣಮೂರ್ತಿ ಮಾತನಾಡಿ, ಇಂಥ ದೊಡ್ಡ ಕವಿಯನ್ನು ಬೆಳಕಿಗೆ ತಂದ ಜಗನ್ನಾಥ ಶಾಸ್ತಿçಗಳಿಗೆ ತಮ್ಮ ಕುಟುಂಬ ಋಣಿಯಾಗಿದೆ ಎಂದರು.
ಉಪಸ್ಥಿತರಿದ್ದರು.
ಕೂಡಲಿ ಜಗನ್ನಾಥ ಶಾಸ್ತಿçಗಳಿಗೆ ಮರಣೋತ್ತರವಾಗಿ ನೀಡಲಾದ ಕವಿ ಪರಮದೇವ ಪ್ರಶಸ್ತಿಯನ್ನು ಅವರ ಪತ್ನಿ ಕಾಮಾಕ್ಷಮ್ಮ ಸ್ವೀಕರಿಸಿದರು. ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಎನ್.ಡಿ.ನಾಗೇಂದ್ರ ರಾವ್, ಹನಿಯ ರವಿ, ಬೈಸ್ಕಲ್ ಸುರೇಶ, ಡಿ.ಎಸ್.ಸುಬ್ರಹ್ಮಣ್ಯಮೂರ್ತಿ, ವಿನಾಯಕ ಪ್ರಭು ಇದ್ದರು.
ಗುಡ್ಡೆಹಿತ್ಲು ಸುಬ್ರಹ್ಮಣ್ಯ ಭಟ್ ಸಂಯೋಜಕತ್ವದಲ್ಲಿ ತುರಂಗ ಭಾರತ ಆಧಾರಿತ ದಂತಳಿಗೆ ಅನಂತ ಹೆಗಡೆ ವಿರಚಿತ ಪುರುಷ ಮೃಗ ಎಂಬ ಯಕ್ಷಗಾನ ತಾಳಮದ್ದಲೆ ಪ್ರಸ್ತುತಪಡಿಸಲಾಯಿತು.
ಕವಿ ಕುಮಾರವ್ಯಾಸ 10 ಪರ್ವಗಳನ್ನು ಬರೆದಿದ್ದರೆ, ಪರಮದೇವ 18 ಪರ್ವಗಳನ್ನು ತುರಂಗ ಭಾರತದಲ್ಲಿ ಬರೆದಿದ್ದಾರೆ. 4,725ವಾರ್ಧಕ ಷಟ್ಪದಿಯ ಪದ್ಯಗಳಿದ್ದು, ಇದನ್ನೆಲ್ಲ ಸಂಗ್ರಹಿಸಿ ಸಂಪಾದಿಸಿದ ಕೂಡಲಿ ಜಗನ್ನಾಥ ಶಾಸ್ತಿçಗಳ ಪ್ರಯತ್ನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ. ಮಹಾಕವಿ ಪರಮದೇವನ ಸಂಸ್ಮರಣೆ ಹಾಗೂ ಕೂಡಲಿ ಜಗನ್ನಾಥ ಶಾಸ್ತಿçಗಳಿಗೆ ಮರಣೋತ್ತರವಾಗಿ ಪರಮದೇವ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.| ಹಾದಿಗಲ್ಲು ಲಕ್ಷಿ÷್ಮÃನಾರಾಯಣ