

ದಾಂಡೇಲಿ: ಕವಿಯು ಮನಸಿನ ನಿರ್ಬಂಧಿತ ಕನಸುಗಳಿಗೆ ತನ್ನ ಭಾವನೆಗಳನ್ನು ಬೆರೆಸಿ ಸಾಮಾಜಿಕ ಮೌಲ್ಯಗಳನ್ನು ಬಳಸಿಕೊಂಡು ಉತ್ಕೃಷ್ಟ ಕವಿತೆ ಸೃಷ್ಟಿ ಮಾಡಿರುತ್ತಾನೆ ಹಾಗಾಗಿ ಇವುಗಳು ಸಮಾಜದ ಪ್ರತಿಬಿಂಬಗಳಾಗಿರುತ್ತವೆ ಎಂದು ಬಂಗೂರನಗರ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷೆ ಉಪನ್ಯಾಸಕ ಎನ್.ವಿ. ಪಾಟೀಲ ಹೇಳಿದರು.
ವನಶ್ರೀ ನಗರದ ಸಾಹಿತ್ಯ ಪ್ರೇಮಿ ನಾಗೇಶ ನಾಯ್ಕ ಅವರ ನಿವಾಸದಲ್ಲಿ ದಾಂಡೇಲಿ ತಾಲೂಕು ಕಸಾಪ ಘಟಕದ ವತಿಯಿಂದ ಆಯೋಜಿಸಿದ್ದ ಸಾಹಿತ್ಯ ಜಗಲಿ ಕಾರ್ಯಕ್ರಮದಲ್ಲಿ ಯುವಕವಿ ವೃಶ್ಚಿಕಮುನಿ ಪ್ರವೀಣಕುಮಾರ ಸುಲಾಖೆ ಅವರ ‘ಅಯ್ಯೋ ನಾನು ದೇವರಲ್ಲ’ ಕವನ ಸಂಕಲನದ ಅವಲೋಕನದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಯುವ ಬರಹಗಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಹಿತ್ಯಾಸಕ್ತರ ಮನೆಯ ಜಗುಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ದಾಂಡೇಲಿ ತಾಲೂಕು ಕಸಾಪ ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ದೇಶಭಂಡಾರಿ ನಿರೂಪಿಸಿದರು. ಶೋಭಾ ಮುದ್ದಪ್ಪನವರ ಪ್ರಾರ್ಥಿಸಿದರು. ಸುರೇಶ ಪಾಲನಕರ ವಂದಿಸಿದರು.
ದಾಸೋಹಿಯಾಗಿ ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ನಾಗೇಶ್ ನಾಯ್ಕ ಮತ್ತು ಅವರು ಕುಟುಂಬದವರು ಸಹಕರಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುರ್ತಜಾ ಹುಸೇನ್ ಆನೆಹುಸೂರು, ಯುವ ಸಾಹಿತಿ ವೃಶ್ಚಿಕಮುನಿ ಪ್ರವೀಣಕುಮಾರ ಸುಲಾಖೆ, ನಾಗೇಶ ನಾಯ್ಕ ಹಾಗೂ ಕಸಾಪ ಅಜೀವ ಸದಸ್ಯರು ಇದ್ದರು.