

ಬೈಲಹೊಂಗಲ: ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗೆ ಜಿಲ್ಲಾ ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ತಾಲೂಕಿನ ಅಮಟೂರ ಗ್ರಾಮದ ಮಡಿವಾಳಪ್ಪ ಅಣ್ಣಪ್ಪ ಹೂಲಿಕೇರಿ (25) ಶಿಕ್ಷೆಗೊಳಗಾದ ಅಪರಾಧಿ.
2021ರ ಜುಲೈ 20ರಂದು ಗ್ರಾಮದ ಬಸ್ ನಿಲ್ದಾಣದಿಂದ ಅಪ್ರಾಪ್ತೆಯನ್ನು ಅಪಹರಿ ಬೈಲಹೊಂಗಲ ಪಟ್ಟಣದ ಹೊರವಲಯದ ದನದ ಶೆಡ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಬಾಲಕಿ ತಂದೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾ ಅಧಿಕಾರಿಗಳಾದ ಸಿಪಿಐ ಯು.ಎಚ್.ಸಾತೇನಹಳ್ಳಿ, ಸಿಬ್ಬಂದಿಗಳಾದ ಎಸ್.ಎ್.ಬಸರಿಕಟ್ಟಿ, ಎಂ.ಕೆ.ಜೈನರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ವಿಚಾರಣೆ ನಡೆಸಿ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎನ್.ವಿ. ಪಾಟೀಲ ವಾದ ಮಂಡಿಸಿದ್ದರು.