

ಮಂಗಳೂರು: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದು ಮಹಿಳೆಯ ಅತ್ಯಾಚಾರ ಮಾಡಿ ಆಕೆಯ ಇಬ್ಬರು ಹೆಣ್ಣು ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಂಡಿದ್ದ ಉಳ್ಳಾಲದ ಸಂಘಟನೆಯೊಂದರ ಮುಖಂಡನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಎಸ್‌ಡಿಪಿಐ ಸಂಘಟನೆ ಮುಖಂಡ ಸಿದ್ದಿಕ್ ಉಳ್ಳಾಲ ಬಂಧಿತ. ಮಹಿಳೆ ತನ್ನನ್ನು ಮತಾಂತರಗೊಳಿಸಿ ವಿವಾಹವಾದ ಗಂಡನಿಂದ ದೂರವಾಗಿ ಉಳ್ಳಾಲದ ಒಂಭತ್ತುಕೆರೆಯಲ್ಲಿ ತನ್ನ ಅಪ್ರಾಪ್ತವಯಸ್ಕ ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆಕೆಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾದ ಸಿದ್ದಿಕ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಹೆಣ್ಣು ಮಕ್ಕಳಿಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದ.
ಇದರ ಬಗ್ಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದ. ಜ.16ರಂದು ಮಹಿಳೆ ಉಳ್ಳಾಲ ಠಾಣೆಯಲ್ಲಿ ಆತನ ವಿರುದ್ಧದೂರು ನೀಡಿದ್ದು, ಅತ್ಯಾಚಾರ ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿ ತಲೆಮರೆಸಿಕೊಂಡಿದ್ದ. ಶನಿವಾರ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.