

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜಕೀಯ ಕಾರಣಕೋಸ್ಕರ ಫೋಕ್ಸೋ ಪ್ರಕರಣ ದಾಖಲಿಸಿದಂತೆ ಕಾಣುತ್ತಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಏಕಾಏಕಿ ಫೋಕ್ಸೋ ಪ್ರಕರಣ ದಾಖಲಿಸಿ ರಾಜಕಾರಣ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಮುನ್ನ ಅವರ ಮೇಲೆ ಪಿಸಿಆರ್ ಪ್ರಕರಣ ದಾಖಲಿಸಲಾಗಿತ್ತು. ಸಿದ್ದರಾಮಯ್ಯ ಎಂದಿಗೂ ಜಾತಿವಾದಿಯಲ್ಲ, ಆದರೂ ಅವರ ಮೇಲೆ ಪ್ರಕರಣ ದಾಖಲಿಸಲಾಯಿತು. ಹಾಗಾಗಿ ಯಾವುದೇ ಪ್ರಕರಣ ದಾಖಲಿಸುವ ಮುನ್ನ ಪೊಲೀಸರು ಆಲೋಚಿಸಿ ಮುಂದಡಿ ಇಡುವುದು ಉತ್ತಮ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕೀಯ ಕಾರಣಕೋಸ್ಕರ ಈ ರೀತಿಯ ಪ್ರಕರಣ ದಾಖಲಿಸುವುದು ಸರಿಯಲ್ಲ. ದೂರುದಾರರ ಹಿನ್ನೆಲೆಯನ್ನು ಸಹ ಪರಿಗಣಿಸುವ ಅವಶ್ಯಕತೆ ಇದೆ. ನ್ಯಾಯಾಲಯ ಸಹ ಬಿ.ಎಸ್. ಯಡಿಯೂರಪ್ಪ ಪ್ರಕರಣದಲ್ಲಿ ಇದನ್ನೇ ಹೇಳಿದೆ ಎಂದರು.