

ಕಾಸರಗೋಡು: ಹೆತ್ತವರ ಜತೆ ದರ್ಗಾ ಸಂದರ್ಶನಕ್ಕೆ ಆಗಮಿಸಿದ್ದ 15ರ ಹರೆಯದ ಬಾಲಕಿಗೆ ದೈಹಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. 2022ರಲ್ಲಿ ಘಟನೆ ನಡೆದಿದೆ, ಈ ಬಗ್ಗೆ ಮಡಿಕೇರಿ ನಿವಾಸಿ ಬಾಲಕಿ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.