

ಹೊನ್ನಾವರ: ತಾಲೂಕಿನ ಅಪ್ರಾಪ್ತ ಬಾಲಕಿಯೊಬ್ಬಳನ್ನು ಎರಡು ತಿಂಗಳ ಹಿಂದೆ ಪುಸಲಾಯಿಸಿ ಅತ್ಯಾಚಾರ ನಡೆಸಿದ ಘಟನೆಗೆ ಸಂಬAಧಿಸಿ ಮೂರು ಜನ ಯುವಕರನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.
ಮಾವಿನಕುರ್ವಾದ ಅಭಿ ಗೌಡ, ಕವಲಕ್ಕಿಯ ಹೇಮಂತ ನಾಯ್ಕ, ಗೇರುಸೊಪ್ಪಾ ದೇವೇಂದ್ರ ನಾಯ್ಕ ಬಂಧಿತ ಆರೋಪಿಗಳು. ಅಭಿ ಗೌಡನು ಇನ್ಸಾ÷್ಟçಗ್ರಾಮ್ ಮುಖಾಂತರ ಬಾಲಕಿಗೆ ಪರಿಚಯವಾಗಿದ್ದ. ನಂತರ ಅವನು ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಕಾರಿನಲ್ಲಿ ಮುಗಳಿ ಬೀಚಗೆ ಕರೆದುಕೊಂಡು ಹೋಗಿ ಅಲ್ಲಿ ಬಾಲಕಿಯೊಂದಿಗ ದೈಹಿಕ ಸಂಪರ್ಕ ಮಾಡಿದ್ದಾನೆ. ಅಭಿಯ ಸ್ನೇಹಿತ ಗೌರೀಶ ಮುಖಾಂತರ ಹೇಮಂತ ನಾಯ್ಕ ಈತನು ಕಳೆದ ಎರಡು ತಿಂಗಳ ಹಿಂದೆ ಬಾಲಕಿಗೆ ಪರಿಚಯವಾಗಿದ್ದು, ಅವನು ಕೂಡ ಸೆಪ್ಟೆಂಬರ್ ತಿಂಗಳಲ್ಲಿ ಅವನ ಬೈಕ್ ಮೇಲೆ ಹೊನ್ನಾವರದಿಂದ ಮುರ್ಡೇಶ್ವರ ಲಾಡ್ಜ್ಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ. ನಂತರ ಹೇಮಂತ ನಾಯ್ಕನ ಮುಖಾಂತರ ದೇವೇಂದ್ರ ನಾಯ್ಕ ಈತನು ಬಾಲಕಿಗೆ ಎರಡು ತಿಂಗಳಿAದ ಪರಿಚಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅವನ ಕಾರಿನಲ್ಲಿ ಮುರ್ಡೇಶ್ವರ ಲಾಡ್ಕ್ ಕರೆದುಕೊಂಡು ಹೋಗಿ ಅಲ್ಲಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ. ಸೆಪ್ಟೆಂಬರ್ ತಿಂಗಳಲ್ಲಿ ಹೊನ್ನಾವರದ ಇಕೋ ಬೀಚನಲ್ಲಿ ಸಹಾ ದೇವೇಂದ್ರ ನಾಯ್ಕ ಈತನು ದೈಹಿಕ ಸಂಪರ್ಕ ಮಾಡಿರುವ ಬಗ್ಗೆ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.