ವೈದ್ಯನ ವಿರುದ್ಧ ಪೋಕ್ಸೋ ಕೇಸ್

Published on

ಕಾಸರಗೋಡು: ಜ್ವರಕ್ಕೆ ಚಿಕಿತ್ಸೆ ಪಡೆಯಲು ಕ್ಲಿನಿಕ್‌ಗೆ ಆಗಮಿಸಿದ 13ರ ಹರೆಯದ ಬಾಲಕಿಗೆ ವೈದ್ಯನೊಬ್ಬ ಕಿರುಕುಳ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ವೈದ್ಯನ ಮೇಲೆ ಚಂದೇರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆ ಜ್ವರದ ಚಿಕಿತ್ಸೆಗಾಗಿ ಬಾಲಕಿ ಕ್ಲಿನಿಕ್‌ಗೆ ಆಗಮಿಸಿದ್ದು, ಈ ಸಂದರ್ಭ ಆರೋಪಿ ವೈದ್ಯ ಕುಞಬ್ದುಲ್ಲ ತಪಾಸಣೆ ನೆಪದಲ್ಲಿ ಬಾಲಕಿಯನ್ನು ಬಿಗಿದಪ್ಪಿಕೊಂಡು ಕಿರುಕುಳ ನೀಡಿದ್ದಾನೆ. ಬಾಲಕಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net