ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಪೋಕ್ಸೋ ಆರೋಪಿ ಬಂಧನ

illustration
illustration
Published on

ಪ್ರಮುಖ ಮುಖ್ಯಾಂಶಗಳು

  • ಗರ್ಭಿಣಿಯಾದ ನಂತರ ಪ್ರಕರಣ ಬೆಳಕಿಗೆ
  • 2025ರ ನವೆಂಬರ್‌ನಲ್ಲಿ ಅತ್ಯಾಚಾರ

ಬೆಳ್ತಂಗಡಿ:ಅಪ್ರಾಪ್ತಬಾಲಕಿಯನ್ನು ಬೆದರಿಸಿ ಅತ್ಯಾಚಾರಮಾಡಿ ಗರ್ಭಿಣಿಯಾಗಿಸಿರುವ ಪ್ರಕರಣಸಂಬಂಧ ಬೆಳ್ತಂಗಡಿ ಪೊಲೀಸರುಆರೋಪಿಯನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ಠಾಣಾ ವ್ಯಾಪ್ತಿಯ 14ವರ್ಷದಅಪ್ರಾಪ್ತ ಬಾಲಕಿಯನ್ನು ಲಾಯಿಲದರಿಜ್ವಾನ್(38)ಎಂಬಾತ 2025ರನವೆಂಬರ್‌ನಲ್ಲಿ ಅತ್ಯಾಚಾರ ಮಾಡಿವಿಚಾರ ಯಾರಿಗೂ ಹೇಳದಂತೆ ಬೆದರಿಕೆಹಾಕಿದ್ದ.ಇದರಿಂದಬಾಲಕಿ ಭಯಗೊಂಡು ಯಾರಿಗೂ ವಿಷಯತಿಳಿಸಿರಲಿಲ್ಲ.ಇತ್ತೀಚೆಗೆಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗಮನೆಯವರು ಆಸ್ಪತ್ರೆಗೆ ಕರೆದುಕೊಂಡುಹೋಗಿ ಪರೀಕ್ಷಿಸಿದಾಗ ಬಾಲಕಿಮೂರೂವರೆ ತಿಂಗಳ ಗರ್ಭಿಣಿಯಾಗಿರುವುದುಬೆಳಕಿಗೆ ಬಂದಿತ್ತು.ನೊಂದ ಬಾಲಕಿಯತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆಮೇ 17ರಂದುಈ ಬಗ್ಗೆ ದೂರು ನೀಡಿದ್ದರು.

ಆರೋಪಿ ರಿಜ್ವಾನ್(38)ನನ್ನುಸೋಮವಾರ ಸಂಜೆ ಉಜಿರೆಯ ನೀರಚಿಲುಮೆಬಳಿ ಬಂಧಿಸಿ ವಿಚಾರಣೆ ನಡೆಸಿಮಂಗಳೂರು ಪೋಕ್ಸೋ ನ್ಯಾಯಾಲಯಕ್ಕೆಮಂಗಳವಾರ ಪೊಲೀಸರು ಹಾಜರುಪಡಿಸಿದ್ದುನ್ಯಾಯಾಲಯ 14ದಿನಗಳನ್ಯಾಯಾಂಗ ಬಂಧನ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net