ಪಾಕೆಟ್​ಫುಲ್ ಆಫ್ ಸ್ಟೋರಿಸ್ ಬಿಡುಗಡೆ

sssssssssssssssss
Published on

ಬೆಂಗಳೂರು: ಐಟಿಸಿ ಎಂಗೇಜ್ ಕಂಪನಿಯು ‘ಪಾಕೆಟ್​ಫುಲ್ ಆಫ್ ಸ್ಟೋರಿಸ್ 2.0’ ಎಂಬ ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆಯಾಗಿದೆ.

ರೋಮ್ಯಾಂಟಿಕ್ ಕಾದಂಬರಿಕಾರ ದುಜೋಯ್ ದತ್ತ ಸಂಪಾದಿಸಿ, ಬರೆದಿರುವ ಈ ಪುಸ್ತಕದಲ್ಲಿ ಪ್ರೇಮಿಗಳೇ ಬರೆದಿರುವ ತಮ್ಮದೇ ಪ್ರೇಮಕತೆಗಳನ್ನು ಪುಸ್ತಕ ಒಳಗೊಂಡಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಪಾಕೆಟ್​ಫುಲ್ ಆಫ್ ಸ್ಟೋರಿಸ್​ನ ಮೊದಲ ಆವೃತ್ತಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಯಲ್ಲಿ ಅದರ ಎರಡನೇ ಆವೃತ್ತಿ ಬಿಡುಗಡೆ ಮಾಡುತ್ತಿರುವುದಾಗಿ ಪುಸ್ತಕವನ್ನು ಪ್ರಕಟಿಸಿರುವ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿಕೊಂಡಿದೆ.

ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಕಂಪನಿಯ ಹಿರಿಯ ಉಪಾಧ್ಯಕ್ಷ ನಂದನ್ ಝಾ ಮಾತನಾಡಿ, ಇದು ಐಟಿಸಿ ಎಂಗೇಜ್ ಕಂಪನಿಯ ಜತೆಗೆ ನಡೆಸುತ್ತಿರುವ ಎರಡನೇ ಸಹಯೋಗವಾಗಿದೆ. ಗ್ರಾಹಕರನ್ನು ಸೆಳೆಯಲು ಈ ಪರಿಕಲ್ಪನೆ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

25 ಸಾವಿರ ಕತೆಗಳು: ಐಟಿಸಿ ಎಂಗೇಜ್ ಸುಂಗಧದ್ರವ್ಯ ಉತ್ಪನ್ನ ವಿಭಾಗ ವಿಶೇಷವಾದ ತಿರುವು ಹೊಂದಿರುವ ತಮ್ಮದೇ ಪ್ರೇಮಕತೆಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಬರೆದು ಕಳಿಸುವಂತೆ #LoveImpromp Two ಎಂಬ ಹ್ಯಾಶ್​ಟ್ಯಾಗ್ ಆರಂಭಿಸಿತ್ತು. ಈ ಹ್ಯಾಶ್​ಟ್ಯಾಗ್​ಗೆ ಪ್ರತಿಕ್ರಿಯಿಸಿದ್ದ 25 ಸಾವಿರ ಪ್ರೇಮಿಗಳು ತಮ್ಮ ಕತೆಗಳನ್ನು ಕಳುಹಿಸಿದ್ದರು. ಇವುಗಳಲ್ಲಿ ದುಜೋಯ್ ದತ್ತ ವಿಶಿಷ್ಟವಾದ ಕತೆಗಳನ್ನು ಸಂಪಾದಿಸಿ ಪುಸ್ತಕಕ್ಕೆ ಸೇರಿಸಿದ್ದಾರೆ.

ಪ್ರೀತಿ ಮತ್ತು ಪ್ರೇಮವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವುದು ವಿಶಿಷ್ಟ ಅನುಭವ ನೀಡಿತು. ಹ್ಯಾಶ್​ಟ್ಯಾಗ್​ಗೆ ಮೊದಲಿಗೆ ಬಂದ ಕೆಲವು ಕತೆಗಳು ತಕ್ಷಣವೇ ನನ್ನ ಗಮನ ಸೆಳೆದವು. ಸಣ್ಣ ಕಥೆಗಳ ಪ್ರಭಾವ ದೀರ್ಘಕಾಲದವರೆಗೆ ಉಳಿಯುತ್ತದೆ ಎಂಬ ನಂಬಿಕೆಯನ್ನು ಅವು ಮೂಡಿಸಿದವು. ಪ್ರತಿಯೊಂದು ಸಣ್ಣ ಕತೆ, ಅದರಲ್ಲಿ ಬಂದ ಸಣ್ಣ ಸಣ್ಣ ತಿರುವುಗಳಿಂದಾಗಿ ಇಂಥ ಕತೆಗಳು ಇನ್ನಷ್ಟು ಬರಲಿ ಎಂದು ಮನಸ್ಸು ಹಂಬಲಿಸಿತು. | ದುಜೋಯ್ ದತ್ತ ಲೇಖಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net