ಜಿಲ್ಲೆಯಲ್ಲಿ 7656 ಫಲಾನಿಭವಿಗಳಿಗೆ ಸ್ವನಿಧಿ ಯೋಜನೆ ಲಾಭ

udp-8-ramdas
Published on

ಉಡುಪಿ: ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳು, ಹಾಲು ಮತ್ತು ಪತ್ರಿಕೆ ಮನೆ ಮನೆಗೆ ಹಾಕುವವರು, ಕ್ಯಾಟರಿಂಗ್​ ಕೆಲಸ ಮಾಡುವವರು, ಅಗಸರು, ಡೆಲಿವರಿ ಬಾಯ್​ಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ 7656 ಮಂದಿ ಲಾನುಭವಿಗಳು ಇದರ ಲಾಭ ಪಡೆದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ರಾಜ್ಯ ಸಂಚಾಲಕ ರಾಮದಾಸ್​ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗಾಗಿ ಕೇಂದ್ರ ಸರ್ಕಾರ 9 ಸಾವಿರ ಕೋಟಿ ರೂ,. ಮೀಸಲಿಟ್ಟಿದ್ದು, ದೇಶದಲ್ಲಿ 46.86 ಲಕ್ಷ ಮಂದಿಗೆ ಮೊದಲ ಹಂತದಲ್ಲಿ 10 ಸಾವಿರ, 2ನೇ ಹಂತದಲ್ಲಿ 20 ಸಾವಿರ, 3ನೇ ಹಂತದಲ್ಲಿ 50 ಸಾವಿರ ರೂ. ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ರಾಜ್ಯದಲ್ಲಿ 3.31 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, 3.08 ಮಂದಿ ಸಾಲ ಪಡೆದಿದ್ದಾರೆ. ಸುಮಾರು 547 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಿಎಂ ಸ್ವನಿಧಿ ಯೋಜನೆ ಜಾರಿ ವಿಷಯದಲ್ಲಿ ಉಡುಪಿ ಜಿಲ್ಲೆ 1 ವರ್ಷದ ಹಿಂದೆ ದೇಶದಲ್ಲೇ ಮೊದಲ ಸ್ಥಾನದಲ್ಲಿತ್ತು. ಈಗ 5ನೇ ಸ್ಥಾನಕ್ಕೆ ಕುಸಿತವಾಗಿದೆ. ಕರ್ನಾಟಕದಲ್ಲಿ 311 ಸ್ಥಳಿಯ ಸಂಸ್ಥೆಗಳಲ್ಲಿ ಸ್ವನಿಧಿ ಯೋಜನೆ ಲಾನುಭವಿಗಳ ಸೋಶಿಯೋ&ಎಕಾನಮಿ ಸರ್ವೆ ನಡೆಯುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 13.5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಯೋಜನೆ ಲಾನುಭವಿಗಳಿಗೆ ವ್ಯವಹಾರಕ್ಕಾಗಿ ಕ್ಯೂರ್​ ಕೋಡ್​ ಸ್ಕಾ$ನಿಂಗ್​ ಮಿಷನ್​ ನೀಡಲಾಗುತ್ತಿದ್ದು, ಅತೀ ಹೆಚ್ಚು ಆನ್​ ಲೈನ್​ ವ್ಯವಹಾರ ದಾಖಲಿಸಿದ ಖಾತೆಗೆ 100 ರೂ. ಬೋನಸ್​ ಲಭಿಸುತ್ತಿದೆ. ಈ ರೀತಿ ಕರ್ನಾಟಕದಲ್ಲಿ ವ್ಯಾಪಾರಿಗಳು 107 ಕೋಟಿ ರೂ. ತೆಗೆದುಕೊಂಡಿದ್ದಾರೆ ಎಂದರು.

ವಿಶ್ವಕರ್ಮ ಯೋಜನೆ
ಮೊದಲ ಹಂತದಲ್ಲಿ ರಾಜ್ಯ 18 ಜಿಲ್ಲೆಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 13 ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಸುರೇಶ್​ ನಾಯಕ್​ ಕುಯಿಲಾಡಿ, ವಿಭಾಗ ಪ್ರಭಾರಿ ಉದಯ್​ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್​ ಶೆಟ್ಟಿ, ಪಿ.ಎಂ. ಸ್ವನಿಧಿ ಯೋಜನೆಯ ಜಿಲ್ಲಾ ಸಂಚಾಲಕ ಕಿಶೋರ್​ ಕುಮಾರ್​ ಕುಂದಾಪುರ, ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದಿಪ್​ ರಾವ್​, ಜಿಲ್ಲಾ ಸಹ ವಕ್ತಾರ ಶಿವಕುಮಾರ್​ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್​. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net