ಆಂಗ್ಲ ಶಿಕ್ಷಣಕ್ಕೆ ಸರ್ವ ತಯಾರಿ : ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಮಾಹಿತಿ

New Project (27)
Published on

ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಸರ್ಕಾರಿ ಶಾಲೆ ಹಾಗೂ ಮೂಲ್ಕಿ ತಾಲೂಕಿನ ಪಿಎಂಶ್ರೀ ಶಾಲೆ ಪ್ರಸ್ತುತ ಎಲ್‌ಕೆಜಿ, ಯುಕೆಜಿ ಸಹಿತ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಸರ್ವ ತಯಾರಿ ಮಾಡಿಕೊಂಡಿದ್ದು ಪರಿಸರದ ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಲಯನ್ಸ್ ಪ್ರಾಂತ್ಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಹೇಳಿದರು.

ದ.ಕ. ಜಿಪಂ ಉನ್ನತೀಕರಿಸಿದ(ಪಿಎಂಶ್ರೀ) ಸರ್ಕಾರಿ ಶಾಲೆ ಕೆ.ಎಸ್.ರಾವ್ ನಗರ 2025-26ನೇ ಸಾಲಿನ ತರಗತಿಗಳು ಅದ್ದೂರಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್‌ಕೆಜಿ ಹಾಗೂ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಉಪಾಧ್ಯಕ್ಷೆ ಲಕ್ಷ್ಮೀ, ಲಯನ್ ಪ್ರತಿಭಾ ಹೆಬ್ಬಾರ್ ಹೂ ನೀಡಿ ತರಗತಿಗೆ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರ್ಕಾರದಿಂದ ನೀಡಿದ ಪಠ್ಯಪುಸ್ತಕಗಳನ್ನು ಗಣ್ಯರು ವಿತರಿಸಿದರು.

ಸತೀಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ಕೆಎಸ್‌ಡಿಎಂ ಸಿ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ದಿನೇಶ್ ಕೆ. ಸ್ವಾಗತಿಸಿದರು. ಶಿಕ್ಷಕಿ ಸುಭಾಷಿಣಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಸುಜಾತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net