

ಮೈಸೂರು: ಕರ್ನಾಟಕ ರಾಜ್ಯದ ಸಮಸ್ತ ನಾಗರಿಕ ಬಂಧುಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಎನ್ನುವ ಮೂಲಕ ಮೈಸೂರಿನಲ್ಲೂ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದರು.
ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಜತೆಗೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ,ಆರ್ಥಿಕ ಮತ್ತು ಆಧ್ಯಾತ್ಮಿಕತೆಯ ದರ್ಶನ ಕರ್ನಾಟಕದಲ್ಲಿ ಕಾಣಬಹುದು ಪುರಾತನ ಸಂಸ್ಕೃತಿಯನ್ನು ಸಂರಕ್ಷಿಸಿ, 21ನೇ ಶತಮಾನದಲ್ಲೂ ಮುಂದುವರಿಸುವ ರಾಜ್ಯ ಕರ್ನಾಟಕ ಉತ್ತಮ ಉದಾಹರಣೆಯಾಗಿದೆ ಎಂದರು.
ಮೈಸೂರು ಇತಿಹಾಸ, ಸಂಸ್ಕೃತಿ ಹಾಗೂ ಆಧುನಿಕತೆಯ ಪ್ರತೀಕವಾಗಿದ್ದು, ಇದಕ್ಕಾಗಿ ನಾನು ಇಲ್ಲೇ ಯೋಗ ದಿನಾಚರಣೆ ನಡೆಸಲು ತೀರ್ಮಾನಿಸಿ ಬಂದಿದ್ದೇನೆ. ಈ ಭೂಮಿ ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರಕವಿ ಕುವೆಂಪು ಅವರಂತಹ ಮಹಾನ್ ನಾಯಕರನ್ನು ನೀಡಿದೆ. ಇನ್ನೂ ಅನೇಕರ ಯೋಗದಾನ ದೇಶಕ್ಕೆ ನೀಡಿದೆ. ಸರ್ಕಾರದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದೇನೆ, ಅವರೊಂದಿಗೆ ಮಾತನಾಡಲು ನನಗೂ ತುಂಬಾ ಖುಷಿಯಾಯಿತು ಎಂದರು.
PM Narendra Modi speech rally in maharaja college at mysore