ಕರ್ನಾಟಕದ ಮಠ ಮಾನ್ಯಗಳನ್ನ ಹಾಡಿ ಹೊಗಳಿದ ಪಿಎಂ ಮೋದಿ

PMModi
Published on

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಸಂಸ್ಕೃತ ಪಾಠಶಾಲೆ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮಠ ಮಾನ್ಯಗಳ ಕೊಡುಗೆಯನ್ನು ವೇದಿಕೆ ಮೇಲೆ ನೆನೆದರು. ಸುತ್ತೂರು ಮಠ, ಸಿದ್ದಗಂಗಾ ಮಠ, ರಂಭಾಪುರಿ ಮಠ, ಹುಬ್ಬಳ್ಳಿಯ ಮೂರು ಸಾವಿರ ಮಠಗಳ ಹೆಸರನ್ನು ಉಲ್ಲೇಖಿಸಿ ಅವುಗಳ ಕೊಡುಗೆ ತಿಳಿಸಿದರು.

ಅಭಿವೃದ್ದಿ, ಶಿಕ್ಷಣ, ಸಂಸ್ಕೃತಿ ಏಳಿಗೆಗೆ ಮಠ ಮಾನ್ಯಗಳ ಕೊಡುಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net