

ಗೋಪಾಲಕೃಷ್ಣ ಪಾದೂರು, ಉಡುಪಿ
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ 2ನೇ ಹೆಣ್ಣು ಮಗುವಿಗೆ 6 ಸಾವಿರ ರೂ. ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕಳೆದ 2 ವರ್ಷಗಳಲ್ಲಿ 4063 ಲಾನುಭವಿಗಳಿಗೆ 2,43,78,000 ರೂ. ಹಣ ಪಾವತಿಯಾಗಿದೆ.
ಗರ್ಭಿಣಿಯರಿಗೆ ಆರ್ಥಿಕ ಪರಿಹಾರವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2017ರಲ್ಲಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಜಾರಿಗೊಳಿಸಿದೆ. ಈ ಮೂಲಕ ಮೊದಲ ಪ್ರಸವದ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ 5,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. 2023ರಲ್ಲಿ ಸರ್ಕಾರ ಯೋಜನೆಯನ್ನು ವಿಸ್ತರಿಸಿದ್ದು, 2ನೇ ಪ್ರಸವದಲ್ಲಿ ಹುಟ್ಟುವ ಹೆಣ್ಣು ಶಿಶುಗಳಿಗೆ 6 ಸಾವಿರ ರೂ. ನೀಡುತ್ತಿದೆ.
ಈ ವರ್ಷ ಶೇ. 95 ಗುರಿ ಸಾಧನೆ
2024&25ನೇ ಸಾಲಿನಲ್ಲಿ ಬ್ರಹ್ಮಾವರದಲ್ಲಿ 359 ಮಂದಿ, ಕಾರ್ಕಳದಲ್ಲಿ 275 ಮಂದಿ, ಕುಂದಾಪುರದಲ್ಲಿ 764 ಮಂದಿ, ಉಡುಪಿಯಲ್ಲಿ 386 ಮಂದಿ ಸೇರಿ ಒಟ್ಟು ಜಿಲ್ಲೆಯಲ್ಲಿ 1784 ಮಂದಿ ನೋಂದಣಿ ಮಾಡಿಕೊಂಡಿದ್ದು, ಶೇ. 95.36ರಷ್ಟು ಗುರಿ ಸಾಧನೆಯಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ಗರ್ಭಿಣಿಯರು ಪೋಷಣ್ ಅಭಿಯಾನದಲ್ಲಿ ಆಹಾರ ಕಿಟ್ ಪಡೆಯುವಾಗ ಎ್ ಆರ್ ಎಸ್ (ೆಸ್ ಪ್ಯಾಪ್ಚರ್ ಸಿಸ್ಟಂ) ಆ್ಯಪ್ನಲ್ಲಿ ಮುಖದ ಗುರುತು ನೀಡುವುದು ಕಡ್ಡಾಯವಾಗಿದೆ. ನೋಂದಣಿ ಮಾಡಿಸಿಕೊಳ್ಳದಿದ್ದರೆ ಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದಿಲ್ಲ. ಜಿಲ್ಲೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಈ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಹಣ ಪಾವತಿ ಹೇಗೆ?
ಮೊದಲನೇ ಪ್ರಸವದ ಗರ್ಭಿಣಿಯರಿಗೆ ಮೊದಲನೇ ಕಂತಿನಲ್ಲಿ 3,000 ರೂ.ಹಾಗೂ ಪ್ರಸವದ ನಂತರ ಎರಡನೇ ಕಂತಿನಲ್ಲಿ 2,000 ರೂ. ನೀಡಲಾಗುತ್ತದೆ. ಎರಡನೇ ಪ್ರಸವದಲ್ಲಿ ಹೆಣ್ಣು ಮಗುವಾಗಿದ್ದರೆ 270 ದಿನದೊಳಗೆ ನೋಂದಣಿ ಮಾಡಿಕೊಳ್ಳಬೇಕು. ಮಗುವಿಗೆ 3 ಚುಚ್ಚುಮದ್ದುಗಳು ನೀಡಿದ ಬಳಿಕ 6,000 ರೂ. ಒಂದೇ ಕಂತಿನಲ್ಲಿ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಮೊದಲನೇ ಹೆರಿಗೆಗೆ 5065 ನೋಂದಣಿ
ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆಯಲ್ಲಿ ಮೊದಲನೇ ಹೆರಿಗೆ ಪ್ರಯೋಜನ ಪಡೆಯಲು 5065 ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಶೇ.107ರಷ್ಟು ಗುರಿ ಸಾಧನೆಯಾಗಿದೆ. ಬ್ರಹ್ಮಾವರದಲ್ಲಿ 991 ಮಂದಿ, ಕಾರ್ಕಳದಲ್ಲಿ 855 ಮಂದಿ, ಕುಂದಾಪುರದಲ್ಲಿ 1935 ಮಂದಿ, ಉಡುಪಿಯಲ್ಲಿ 1284 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ವರ್ಷ 4728 ವಾರ್ಷಿಕ ಗುರಿ ನಿಗದಿ ಮಾಡಲಾಗಿತ್ತು.