ಪಿಎಂ ಕಿಸಾನ್​ ಎಪಿಕೆ ಆ್ಯಪ್​ ಮೂಲಕ ರೈತನಿಗೆ ವಂಚನೆ

Cibra
Published on

ರಾಣೆಬೆನ್ನೂರ: ರೈತರೊಬ್ಬರ ಮೊಬೈಲ್​ಗೆ ಪಿಎಂ ಕಿಸಾನ್​ ಎಪಿಕೆ ಆ್ಯಪ್​ ಕಳುಹಿಸಿ ಅದನ್ನು ಇನ್​ಸ್ಟಾಲ್​ ಮಾಡಿಸಿ ಅವರ ಖಾತೆಯಿಂದ 72 ಸಾವಿರ ರೂ.ಅನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಕುರಿತು ಹಾವೇರಿ ಸೈಬರ್​ ಕೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ತುಮ್ಮಿಕನಟ್ಟಿ ಗ್ರಾಮದ ಪ್ರವಿಣಕುಮಾರ ಬಸವರಾಜಪ್ಪ ಜಾದವ್​ (32) ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ಯಾರೋ ಅಪರಿಚಿತ ವ್ಯಕ್ತಿ ಪಿಎಂ ಕಿಸಾನ್​ ಎಪಿಕೆ ಎಂಬ ಆಪ್​ ಕಳುಹಿಸಿದ್ದು, ಪ್ರವಿಣಕುಮಾರ ಅದನ್ನು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ನಂತರ ಅವರ ಖಾತೆಯಲ್ಲಿದ್ದ 72 ಸಾವಿರ ರೂ. ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net