ಗ್ರಾಪಂ ಮಟ್ಟದ ಪ್ರಚಾರಕ್ಕೆ ಪ್ರಧಾನಿ ತಂದಿದ್ದು ದುರ್ದೈವ ಎಂದ‌ ಮಹೇಂದ್ರ

bengaluru-prime-minister-narendra-modi-during-a-roadshow-ahead-of-karnataka-ass-.webp
Published on

ಬೆಳಗಾವಿ : ಬಿಜೆಪಿಯ ಪಿ.ರಾಜೀವ್ ವಿರುದ್ಧ ಕಳೆದ ಬಾರಿಯೇ ಟಿಕೆಟ್ ನೀಡಿದ್ದರೆ ಆಗಲೇ ಗೆಲ್ಲುತ್ತಿದ್ದೆ. ಈ ಬಾರಿ ಇನ್ನೂ ಹೆಚ್ಚಿನ ಲೀಡ್ ನಿರೀಕ್ಷೆ ಮಾಡಿದ್ದೇ ಆದರೆ, ಅಷ್ಟು ಸಾಧ್ಯವಾಗಿಲ್ಲ. ಪ್ರಧಾನಿಯನ್ನು ಗ್ರಾಮ ಮಂಚಾಯಿತಿ ಮಟ್ಟದ ಪ್ರಚಾರಕ್ಕೆ ಕರೆತಂದದ್ದು ದುರ್ದೈವ ಎಂದು  ನೂತನ ಶಾಸಕ ಮಹೇಂದ್ರ ತಮ್ಮಣ್ಣವರ ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ಚುನಾವಣೆಯಿಂದ ನಾನು ಜನರ ಸಂಪರ್ಕದಲ್ಲಿದ್ದೇನೆ. ಕುಡಚಿ ವಿಧಾನಸಭಾ ಕ್ಷೇತ್ರಕ್ಕೆ ಮೂಲಭೂತವಾಗಿ ಏನು ಬೇಕೋ ನನಗೆ ಗೊತ್ತು. ನಾನು ಅಭಿವೃದ್ದಿ ಮಾಡುತ್ತೇನೆ ಎಂದರು.
------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net