

ಬೆಳಗಾವಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಹೆಡ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ 14ಜನರಿಗೆ ಎಎಸ್ ಐ ಹುದ್ದೆಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ವಿವಿಧ ಠಾಣೆಯಲ್ಲಿ ಪೊಲೀಸ್ ಠಾಣೆಯ ಸಿಎಚ್ ಸಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆ.ಬಿ. ಕಾಂಬಳೆ, ಎಸ್. ವಾಯ್. ಹೊಳೆಗಾರ, ಬಿ.ಎಸ್. ಪೂಜಾರಿ, ಎನ್.ಐ. ಕೆಂಪಶಿವಣ್ಣವರ, ಜಿ.ಸಿ. ಆಲದಕಟ್ಟಿ,ಬಿ.ಪಿ. ಪರಗೊನ್ಮವರ,ಎ.ಬಿ.ಚಂಡೂರಿ, ಐ.ಜಿ.ವಾಳಕಿ, ಪಿ.ಎನ್.ವಾಳಕಿ, ಎಲ್.ಎನ್.ಕುಂಬಾರ,ಎಂ.ಸಂಬಳದ,ಎ.ಕೆ.ಬಾಡಗಿ, ಎಸ್. ಡಿ. ಬಾಗೋಜಿ ಹಾಗೂ ವಿ.ಎನ್. ಹೆಬ್ಬಾಳ ಅವರಿಗೆ ಎಎಸ್ ಐ ಹುದ್ದೆಗೆ ಮುಂಬಡ್ತಿ ನೀಡಿ ವಿವಿಧ ಠಾಣೆಗಳಿಗೆ ನಿಯೋಜಿಸಿ ಆದೇಶ ಹೊರಡಿಸಿದೆ.
ಎಸ್ಪಿ.ಡಾ.ಭೀಮಾಶಂಕರ ಗುಳೇದ ಅವರು ಮಂಗಳವಾರ ಮುಂಬಡ್ತಿ ಪಡೆದಿದ್ದ ಎಲ್ಲ ಅಧಿಕಾರಿಗಳಿಗೆ ಆದೇಶ ಪ್ರತಿ ನೀಡಿ ಅಭಿನಂದನೆ ಸಲ್ಲಿಸಿದರು.