ಬಾಲಕರು ಓಡಿಸುತ್ತಿದ್ದ ಬೈಕ್ಗಳನ್ನು ಜಪ್ತಿ ಮಾಡಿದ‌ ಪೊಲೀಸರು

Screenshot_20250807_214648_Drive.jpg
Published on

ಬೆಳಗಾವಿ: ನಗರದಲ್ಲಿ ಅಪ್ರಾಪ್ತ ಬಾಲಕರು ಓಡಿಸುತ್ತಿದ್ದ ಬೈಕ್ ಗಳ ವಿರುದ್ಧ ಗುರುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು 9 ಬೈಕ್ ಗಳನ್ನು ಜಪ್ತಿ ಮಾಡಿಕೊಂಡು ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ನಗರದ ವಿವಿಧ ಖಾಸಗಿ ಕಾಲೇಜುಗಳಲ್ಲಿ ಪಿಯುಸಿ, ಡಿಪ್ಲೋಮಾ ಓದುತ್ತಿರುವ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತೆಗೆದು ಕೊಂಡು ಹೋಗುತ್ತಿದ್ದರು. ಈ ವೇಳೆ ಸಂಚಾರಿ ಪೋಲೀಸರು ಕಾರ್ಯಚರಣೆ ನಡೆಸಿ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಎಲ್ಲ ಬೈಕ್ ಗಳ ಮಾಲೀಕರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net