ಅಧಿಕಾರ ದುರ್ಬಳಕೆ; ಡಿಸಿ ವಿರುದ್ಧ ‌ಕ್ರಮಕ್ಕೆ ಪಾಲಿಕೆ ಆಡಳಿತ ಒತ್ತಾಯ!

IMG-20250825-WA0009.jpg
Published on

-ಡಿಸಿ ಸರ್ವಾಧಿಕಾರಿ ನಿರ್ಧಾರಕ್ಕೆ ಸದಸ್ಯರು ಆಕ್ರೋಶ

ಬೆಳಗಾವಿ: ಗಣೇಶೋತ್ಸವ ಪೂರ್ವಭಾವಿ ಸಭೆಗಳಿಗೆ ಮಹಾನಗರ ಪಾಲಿಕೆ ಆಡಳಿತ‌ ಕಡೆಗಣಿಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು. ಗಣೇಶೋತ್ಸವ ವೇಳೆ ಸಾರ್ವಜನಿಕ ಮಹಾಪ್ರಸಾದ್ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಡಿಸಿ ಮೊಹಮ್ಮದ್ ರೋಷನ್‌ವಿರುದ್ಧ‌ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿ, ರಾಜ್ಯಪಾಲರ ಬಳಿ ನಿಯೋಗ ತೆಗೆದುಕೊಳ್ಳಲು ಪಾಲಿಕೆ ಸದಸ್ಯರು ನಿರ್ಣಯ ತೆಗೆದುಕೊಂಡಿದ್ದಾರೆ.

ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಜಿಲ್ಲಾಡಳಿತ ನಡುವಳಿಕೆ ವಿರುದ್ಧ ಸದಸ್ಯರು ಆಕ್ರೋಶ.

ಗಣೇಶೋತ್ಸವಕ್ಕೆ ಎಲ್ಲ ರೀತಿಯ ಸಿದ್ದತೆಗಳನ್ನು ಪಾಲಿಕೆ ಮಾಡುತ್ತಿದೆ. ಅನುದಾನ ಪಾಲಿಕೆ ಖರ್ಚು ಮಾಡುತ್ತಿದೆ.‌ಆದರೆ, ಜಿಲ್ಲಾಡಳಿತ ಪಾಲಿಕೆ‌ ಮೇಯರ್ , ಉಪಮೇಯರ್, ಸದಸ್ಯರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಗಣೇಶೋತ್ಸವ ಪೂರ್ವಭಾವಿ ಸಭೆ, ಸಮಾರಂಭಗಳಿಗೆ ಆಹ್ವಾನಿಸಿಲ್ಲ. ಪಾಲಿಕೆಗೆ ಯಾವುದೇ ಮಾಹಿತಿ ನೀಡದೆ ಕ್ರಮ ವಹಿಸುವುದು ಒಳ್ಳೆಯದಲ್ಲ. ನಗರ ಪೋಲಿಸ ಆಯುಕ್ತರ ಕೂಡ ಭದ್ರತೆ ಕುರಿತು ಮಾಹಿತಿ ನೀಡದೆ ನಿರ್ಲಕ್ಷ್ಯ ಸಲ್ಲದು.

ಡಿಸಿ ಸರ್ವಾಧಿಕಾರಿ ‌ಆಡಳಿತ ವಿರುದ್ಧ ಸಿಎಂ, ರಾಜ್ಯಪಾಲರಿಗೆ ನಿಯೋಗ ತೆಗೆದುಕೊಂಡು ಹೋಗಲು ಸದಸ್ಯರು ನಿರ್ಣಯ ತೆಗೆದುಕೊಂಡಿದ್ದಾರೆ. ಜತೆಗೆ ರಾಜಭವನ, ವಿಧಾನಸೌಧ ಮುಂದೆ ಸದಸ್ಯರು ಧರಣಿ ನಡೆಸಲು ನಿರ್ಣಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net