ಬೆಳಗಾವಿ ಮಹಾನಗರದಲ್ಲಿ 30ಸಾವಿರ ಆಸ್ತಿಗಳಿಗೆ ಬಿ-ಖಾತಾ

IMG-20250224-WA0006.jpg
Published on

ಬೆಳಗಾವಿ: ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೋಮವಾರ ಬಿ ಖಾತಾ ಬೃಹತ್ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಹಾನಗರಕ್ಕೆ ಪ್ರತಿ ವರ್ಷ‌ತಪ್ಪದೆ ತೆರಿಗೆ ಕಟ್ಟುಕೊಂಡು ಬರುತ್ತಿರುವ ತೆರಿಗೆದಾರರನ್ನು ಪಾಲಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ‌ ಮೂವತ್ತು ಸಾವಿರ ಅನಧಿಕೃತ ಆಸ್ತಿ ಗಳನ್ನು ಗುರುತಿಸಲಾಗಿದ್ದು, ಈ ಎಲ್ಲ ಆಸ್ತಿಗಳ ಬಿ.ಖಾತಾ‌ವಿತರಣೆ ಮಾಡಲಾಗುವುದು. ಮೂರುಬತಿಂಗಳ ಸಮಯವಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತೆ ಶುಭ ಬಿ ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net