ಬೆಳಗಾವಿ ಪಾಲಿಕೆಯಲ್ಲಿ ಬಾಡಿಗೆ ಕಾರುಗಳ ದರ್ಬಾರ್; ಸದಸ್ಯರು ಆಕ್ಷೇಪ

IMG-20250116-WA0011.jpg
Published on

ಬೆಳಗಾವಿ: ಪಾಲಿಕೆ ವಿವಿಧ ಭಾಗಗಳಲ್ಲಿ ಬೇಕಾಬಿಟ್ಟಿಯಾಗಿ ಬಾಡಿಗೆ ಕಾರುಗಳನ್ನು ಬಳಕೆ ಮಾಡಲಾಗುತ್ತಿದ್ದು, ವಾರ್ಷಿಕ ಡಿಸೆಲ್, ಪೆಟ್ರೋಲ್, ಬಾಡಿಗೆ ಹೆಸರಿನಲ್ಲಿ ಕೋಟ್ಯಂತರ ರೂ. ದುಂದುವೆಚ್ಚ ಮಾಡಲಾಗುತ್ತಿದೆ. ಕೆಲ ಅಧಿಕಾರಿ, ಸಿಬ್ಬಂದಿ ಸರ್ಕಾರಿ ವಾಹನಗಳನ್ನು ತರಕಾರಿ, ಹಾಲು ತರಲು ಬಳಕೆ ಮಾಡುತ್ತಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.

ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಜರುಗಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ತೆರಿಗೆ ಸೋರಿಕೆ, ಬಾಡಿಗೆ ಕಾರುಗಳ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಹತ್ತು ಲೀಟರ್ ಡಿಸೆಲ್ ಹಾಕಿದರೆ 50 ಲೀಟರ್ ಬಿಲ್ ತೆಗೆಯುತ್ತಿದ್ದಾರೆ. ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಒಬ್ಬರು 2 ರಿಂದ 4 ಕಾರುಗಳನ್ನು ಪಾಲಿಕೆಗೆ ಬಾಡಿಗೆ ಬಿಟ್ಟಿದ್ದಾರೆ. ಕಾರುಗಳು ಬಾಡಿಗೆ ದಂಧೆಯಾಗಿ‌ಪರಿಣಮಿಸಿದೆ.ಹಾಗಾಗಿ ಬಾಡಿಗೆ ವಾಹನಗಳ ಸಂಖ್ಯೆ ಕಡಿಮೆಗೊಳಿಸಿ. ಇಲ್ಲವೇ ಹೊಸ ಕಾರುಗಳನ್ನು ಖರೀದಿಸಿ ಎಂದು ಸದಸ್ಯರು ಆಗ್ರಹಿಸಿದರು.

ರಾಜ್ಯೋತ್ಸವಕ್ಕೆ ಅನುದಾನ ಮೀಸಲಿಡಿ:

ಪ್ರತಿ ವರ್ಷ ಪಾಲಿಕೆಯು ತನ್ನ ವಾರ್ಷಿಕ ಬಜೆಟ್‌ನಲ್ಲಿ ಗಣೇಶೋತ್ಸವ, ಶಿವಾಜಿ ಜಯಂತಿ ಆಚರಣೆಗೆ ಅನುದಾನ ಮೀಸಲಿಡುತ್ತಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುದಾನ ಮೀಸಲಿಡಬೇಕು. ಕಿತ್ತೂರು ರಾಣಿ ಚನ್ನಮ್ಮ, ಸಂಗೋಳ್ಳಿ ರಾಯಣ್ಣ ವೃತ್ತಗಳ ಅಭಿವೃದ್ಧಿಗೆ ಹಣ ಮೀಸಲಿಡಬೇಕು. ಕನ್ನಡ ಪರ ಚಟುವಟಿಕೆಗಳಿಗೆ ಅನುದಾನ ಮೀಸಲಿಡದೆ ನಿರ್ಲಕ್ಷೃ ಮಾಡುವುದು ಸರಿಯಲ್ಲ ಎಂದು ಕನ್ನಡ ಪರ ಹೋರಾಟಗಾರ ಮೆಹಬೂಬ್ ಮಕಾಂದಾರ ಇತರರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net