ಹಾಲು ಉತ್ಪಾದಕರ ಸಂಘಕ್ಕೆ ಉತ್ತಮ ಲಾಭ

mkg
Published on

ನ್ಯಾಮತಿ: ರಾಮೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ನಿವ್ವಳ ರೂ. 3 ಲಕ್ಷ ರೂ. ಲಾಭ ಗಳಿಸಿರುವುದಾಗಿ ಸಂಘದ ಅಧ್ಯಕ್ಷ ರಾಮೇಶ್ವರ ಜಿ. ನಾಗರಾಜಪ್ಪ ಹೇಳಿದರು.

ತಾಲೂಕಿನ ರಾಮೇಶ್ವರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಹೆಚ್ಚು ಹಾಲು ನೀಡಿದ ಮೂವರು ಸದಸ್ಯರಿಗೆ ಸಂಘದ ವತಿಯಿಂದ ನೆನಪಿನ ಉಡುಗೊರೆ ವಿತರಿಸಿ ಶನಿವಾರ ಮಾತನಾಡಿದರು.

9,314 ಲೀಟರ್ ಹಾಲು ಸರಬರಾಜು ಮಾಡಿದ ಜಿ. ಗೀತಾ ಸುರೇಶಪ್ಪ ಅವರಿಗೆ ಪ್ರಥಮ ಸ್ಥಾನ, 7441 ಲೀ. ಸರಬರಾಜು ಮಾಡಿದ ಜಿ.ಗೀತಾ ಪರಮೇಶ್ವರಪ್ಪ ದ್ವಿತೀಯ ಸ್ಥಾನ, 7375 ಲೀ ಸರಬರಾಜು ಮಾಡಿದ ಮಹೇಶ್ವರಪ್ಪ ಎಂ.ಜಿ. ತೃತೀಯ ಸ್ಥಾನ ಪಡೆದರು.

ಸಭೆಯಲ್ಲಿ ಶಿಮೂಲ್ ಒಕ್ಕೂಟದ ವಿಸ್ತರಣಾಧಿಕಾರಿ ಎನ್. ಶ್ವೇತಾ, ಉಪಾಧ್ಯಕ್ಷ ಟಿ.ಆರ್. ಲೋಕೇಶ್ವರಪ್ಪ, ನಿರ್ದೇಶಕ ಮಲ್ಲೇಶಪ್ಪ, ಡಿ. ರಾಜಪ್ಪ, ಎಂ.ಜೆ. ಮಹೇಶ್ವರಪ್ಪ, ಕೆ. ಚಂದ್ರಶೇಖರಪ್ಪ, ಡಿ. ತೀರ್ಥಪ್ಪ, ಬಿ. ರಮೇಶಪ್ಪ, ಎಸ್. ಚನ್ನಬಸಪ್ಪ, ಎಚ್. ಸಾಕಮ್ಮ, ಎಂ. ಲತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net